ಅಮೆರಿಕ, ಫಿಲಿಪ್ಪೀನ್ಸ್ ಜಂಟಿ ಸಮರಾಭ್ಯಾಸ

Update: 2024-10-15 16:05 GMT

PC : APF

ಮನಿಲಾ : ಚೀನಾವು ತೈವಾನ್ನಿ ಸುತ್ತ ಬೃಹತ್ ಸೇನಾ ಕವಾಯತು ನಡೆಸಿದ ಮರುದಿನ ಉತ್ತರ ಮತ್ತು ಪಶ್ಚಿಮ ಫಿಲಿಪ್ಪೀನ್ಸ್‍ ನಲ್ಲಿ ಅಮೆರಿಕ ಮತ್ತು ಫಿಲಿಪ್ಪೀನ್ಸ್‍ ನ ನೌಕಾಪಡೆಗಳು ಜಂಟಿ ಸಮರಾಭ್ಯಾಸಕ್ಕೆ ಚಾಲನೆ ನೀಡಿವೆ.

ಸ್ವಯಂ ಆಡಳಿತದ ತೈವಾನ್ನಿಂನದ ಸುಮಾರು 800 ಕಿ.ಮೀ ದೂರದಲ್ಲಿರುವ ಫಿಲಿಪ್ಪೀನ್ಸ್‍ ನ ಮುಖ್ಯ ದ್ವೀಪ ಲುಝೋನ್ನಡ ಉತ್ತರ ಕರಾವಳಿಯ ರಕ್ಷಣಾ ವ್ಯವಸ್ಥೆಗಳನ್ನು ಕೇಂದ್ರೀಕರಿಸಿ ವಾರ್ಷಿಕ ಸಮರಾಭ್ಯಾಸ ನಡೆಯುತ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮತ್ತು ಫಿಲಿಪ್ಪೀನ್ಸ್ ನಡುವೆ ಹೆಚ್ಚುತ್ತಿರುವ ಘರ್ಷಣೆಯ ನಡುವೆ ಅಮೆರಿಕ-ಫಿಲಿಪ್ಪೀನ್ಸ್ ಜಂಟಿ ಸಮರಾಭ್ಯಾಸ ನಡೆಯುತ್ತಿದೆ.

ಮಂಗಳವಾರ ಸಮರಾಭ್ಯಾಸದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಫಿಲಿಪ್ಪೀನ್ಸ್ ಮರೈನ್ ಕಾರ್ಪ್ಸ್ ನ ಕಮಾಂಡರ್ ಮೇ|ಜ| ಅರ್ಟುರೊ ರೊಜಾಸ್ ` ಸಮರಾಭ್ಯಾಸವನ್ನು ಈ ಹಿಂದೆಯೇ ನಿಗದಿಗೊಳಿಸಲಾಗಿದೆ. ಈ ವಲಯದಲ್ಲಿ ನಡೆಯುತ್ತಿರುವುದಕ್ಕೂ ಸಮರಾಭ್ಯಾಸಕ್ಕೂ ಸಂಬಂಧವಿಲ್ಲ. ಕರಾವಳಿ ರಕ್ಷಣೆಯ ಸಿದ್ಧಾಂತದೊಂದಿಗೆ ಇದು ನಡೆಯುತ್ತದೆ. ನಮ್ಮ ಭೂಪ್ರದೇಶದ ಮೇಲೆ ಸಂಭಾವ್ಯ ಆಕ್ರಮಣದ ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳು ಸಮರಾಭ್ಯಾಸದ ಸಿದ್ಧಾಂತವಾಗಿದೆ ' ಎಂದರು. ವಿವಾದಿತ ದಕ್ಷಿಣ ಚೀನಾ ಸಮುದ್ರದ ಬಳಿಯಿರುವ ದಕ್ಷಿಣ ಫಿಲಿಪ್ಪೀನ್ಸ್ನಸ ಪಲಾವನ್ ದ್ವೀಪ ಜಂಟಿ ಸಮರಾಭ್ಯಾಸದ ಕೆಲವು ಭಾಗಗಳನ್ನು ಆಯೋಜಿಸಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News