ಗಾಝಾದ್ಯಂತ ಇಸ್ರೇಲ್ ದಾಳಿ : 8 ಮಕ್ಕಳ ಸಹಿತ 18 ಮಂದಿ ಮೃತ್ಯು

Update: 2024-08-27 16:18 GMT

   ಸಾಂದರ್ಭಿಕ ಚಿತ್ರ | PC :PTI

ಗಾಝಾ : ಗಾಝಾ ಪಟ್ಟಿಯಾದ್ಯಂತ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 8 ಮಕ್ಕಳ ಸಹಿತ ಕನಿಷ್ಠ 18 ಮಂದಿಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.

ಗಾಝಾ ನಗರದ ತುಫಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ನಡೆದ ವೈಮಾನಿಕ ದಾಳಿಯಲ್ಲಿ ಮೂವರು ಮಕ್ಕಳು ಹಾಗೂ ತಾಯಿ ಸಾವನ್ನಪ್ಪಿದ್ದಾರೆ. ದಾಳಿಯ ಬಳಿಕ ಇತರ ಮೂವರು ನಾಪತ್ತೆಯಾಗಿದ್ದಾರೆ. ಗಾಝಾ ಪಟ್ಟಣದಲ್ಲಿ ಕಟ್ಟಡವೊಂದನ್ನು ಗುರಿಯಾಗಿಸಿ ನಡೆದ ಮತ್ತೊಂದು ದಾಳಿಯಲ್ಲಿ ಮಗು, ಮೂವರು ಮಹಿಳೆಯರ ಸಹಿತ 5 ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಗಾಝಾದಲ್ಲಿ ಮಂಗಳವಾರ ಬೆಳಿಗ್ಗೆ ಮನೆಯೊಂದನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಮೂವರು ಮಕ್ಕಳು, ಮಹಿಳೆ ಸಹಿತ 5 ಮಂದಿ ಸಾವನ್ನಪ್ಪಿದ್ದಾರೆ.

ಖಾನ್ ಯೂನಿಸ್ ನಗರದ ಪಶ್ಚಿಮದಲ್ಲಿ ನಡೆದ ಮತ್ತೊಂದು ವಾಯು ದಾಳಿಯಲ್ಲಿ ಮನೆಯೊಂದು ನೆಲಸಮಗೊಂಡಿದ್ದು ಮಗುವಿನ ಸಹಿತ ಕನಿಷ್ಠ 4 ಮಂದಿ ಮೃತಪಟ್ಟಿದ್ದಾರೆ ಎಂದು ಗಾಝಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News