ಗಾಝಾದ್ಯಂತ ಆಕ್ರಮಣ ವಿಸ್ತರಿಸಲು ಇಸ್ರೇಲ್ ಯೋಜನೆ
Update: 2025-04-12 22:51 IST

PC : PTI
ಗಾಝಾ: ಗಾಝಾದಲ್ಲಿ ಈಗ ನಡೆಯುತ್ತಿರುವ ಕಾರ್ಯಾಚರಣೆಯನ್ನು ಗಾಝಾ ಪಟ್ಟಿಯ ಬಹುತೇಕ ಪ್ರದೇಶಗಳಿಗೆ ವಿಸ್ತರಿಸಲು ಮಿಲಿಟರಿ ಯೋಜಿಸಿದೆ ಎಂದು ಇಸ್ರೇಲ್ ನ ರಕ್ಷಣಾ ಸಚಿವ ಇಸ್ರೇಲ್ ಕಟ್ಜ್ ಶನಿವಾರ ಘೋಷಿಸಿದ್ದು ಸಕ್ರಿಯ ಯುದ್ಧವಲಯಗಳಿಂದ ಸ್ಥಳಾಂತರಗೊಳ್ಳುವಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಶೀಘ್ರದಲ್ಲೇ ಐಡಿಎಫ್ ನ (ಇಸ್ರೇಲ್ ಭದ್ರತಾ ಪಡೆ) ಕಾರ್ಯಾಚರಣೆಯನ್ನು ಗಾಝಾದ್ಯಂತ ಇತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು ಎಂದು ಕಟ್ಝ್ ಘೋಷಿಸಿದ್ದು, ದಕ್ಷಿಣ ಗಾಝಾದಲ್ಲಿನ ಕಾರಿಡಾರ್ ಒಂದನ್ನು ಪಡೆಗಳು ವಶಪಡಿಸಿಕೊಂಡಿವೆ. ಗಾಝಾದ ರಫಾ ನಗರದ ಸುತ್ತುವರಿಯುವಿಕೆಯನ್ನು ಪೂರ್ಣಗೊಳಿಸಲಾಗಿದೆ ಎಂದಿದ್ದಾರೆ. ಮಾರ್ಚ್ 18ರಂದು ಗಾಝಾದಲ್ಲಿ ಕಾರ್ಯಾಚರಣೆ ಪುನರಾರಂಭಿಸಿದಾಗಿನಿಂದ ರಫಾದಾದ್ಯಂತದ ನಿವಾಸಿಗಳಿಗೆ ಸ್ಥಳಾಂತರಗೊಳ್ಳಲು ಇಸ್ರೇಲ್ ಮಿಲಿಟರಿ ನಿರಂತರ ಆದೇಶಿಸುತ್ತಿದೆ.