ತಡಮಾಡದೆ ಕದನವಿರಾಮ ಮಾತುಕತೆಗೆ ಮರಳಲು ಇಸ್ರೇಲ್-ಹಮಾಸ್ ಜಾಗತಿಕ ನಾಯಕರ ಆಗ್ರಹ

Update: 2024-08-09 16:21 GMT

ಸಾಂದರ್ಭಿಕ ಚಿತ್ರ

ವಾಶಿಂಗ್ಟನ್ : ಗಾಝಾದಲ್ಲಿ ಸಂಘರ್ಷದ ಕುರಿತು ಮುಂದಿನ ವಾರದೊಳಗೆ ಮಾತುಕತೆಗೆ ಮರಳಬೇಕೆಂದು ಅಮೆರಿಕ, ಈಜಿಪ್ಟ್, ಹಾಗೂ ಕತರ್ ದೇಶಗಳ ನಾಯಕರು ಇಸ್ರೇಲ್ ಹಾಗೂ ಹಮಾಸ್ ಅನ್ನು ಆಗ್ರಹಿಸಿವೆ. ಮಾತುಕತೆಯಲ್ಲಿ ಕದನವಿರಾಮ ಹಾಗೂ ಒತ್ತೆಯಾಳುಗಳ ಬಿಡುಗಡೆ ಬಗ್ಗೆ ಮಾತ್ರವೇ ಚರ್ಚಿಸಬೇಕಾದಿದೆಯೆಂದು ಅವರು ಹೇಳಿವೆ.

ಮಾತುಕತೆಗೆ ಸಂಬಂಧಿಸಿ ಯಾವುದೇ ಸಮಯವನ್ನು ವ್ಯರ್ಥಗೊಳಿಸಬಾರದು, ಮಾತುಕತೆ ವಿಳಂಬಿಸಲು ಯಾವುದೇ ಕಾರಣವನ್ನು ನೀಡಕೂಡದು ಎಂದು ಅವು ಜಂಟಿ ಹೇಳಿಕೆಯೊಂದರಲ್ಲಿ ಆಗ್ರಹಿಸಿವೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಈಜಿಫ್ಟ್ ಅಧ್ಕ್ಷ ಅಬ್ದೆಲ್ ಫತಹ್ ಅಲ್ಸಿಸಿ ಹಾಗೂ ಕತಾರ್ನ ಅಮಿರ್ ತಮೀಮ್ ಅಲ್ ಥಾನಿ ಆವರು ಆಗಸ್ಟ್ 15ರಂದು ಹಮಾಸ್ ಹಾಗೂ ಇಸ್ರೇಲ್ ನಡುವೆ ಮಾತುಕತೆಗೆ ಆಗ್ರಹಿಸಿದವರಲ್ಲಿ ಪ್ರಮುಖರು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರು ಹೇಳಿಕೆಯೊಂದನ್ನು ನೀಡಿ,ಅಮೆರಿಕ ಹಾಗೂ ಇತರ ಸಂಧಾನಕಾರರ ಪ್ರಸ್ತಾವನೆಯನ್ನು ಅನುಸರಿಸಿ ಇಸ್ರೇಲ್ 15ರಂದು ಮಾತುಕತೆಗೆ ನಿಯೋಗವನ್ನು ಕಳುಹಿಸಲಿದೆ. ಆದರೆ ಮಾತುಕತೆಯ ಕಾರ್ಯಚೌಕಟ್ಟಿನ ಅನುಷ್ಠಾನದ ಕುರಿತ ಒಪ್ಪಂದದ ವಿವರಗಳನ್ನು ಅಂತಿಮಗೊಳಿಸಲು ಅದು ನಿಯೋಗವೊಂದನ್ನು ಕಳುಹಿಸಲಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News