ಇಸ್ರೇಲ್ ಗೆ ಹಮಾಸ್ ವಿರುದ್ಧ ಸ್ವರಕ್ಷಣೆಯ ಹಕ್ಕಿಲ್ಲ: ವಿಶ್ವಸಂಸ್ಥೆ ಪ್ರತಿನಿಧಿ ಹೇಳಿಕೆ

Update: 2023-11-17 16:49 GMT

PHOTO: PTI

ಸಿಡ್ನಿ : ಹಮಾಸ್ ವಿರುದ್ಧ ಸ್ವರಕ್ಷಣೆಯ ಹಕ್ಕು ಇಸ್ರೇಲ್ ಗೆ ಇಲ್ಲ ಎಂದು ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶಕ್ಕೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಫ್ರಾನ್ಸೆಸ್ಕಾ ಅಲ್ಬಾನಿಸ್ ಪ್ರತಿಪಾದಿಸಿದ್ದಾರೆ.

ಆಸ್ಟ್ರೇಲಿಯಾದ `ನ್ಯಾಷನಲ್ ಪ್ರೆಸ್ ಕ್ಲಬ್'ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಲ್ಬಾನಿಸ್ ` ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಮತ್ತೊಂದು ದೇಶದಿಂದ ಅಪಾಯ ಎದುರಾದರೆ ಸ್ವರಕ್ಷಣೆಯ ಹಕ್ಕು ಅನ್ವಯಿಸುತ್ತದೆ. ಆದರೆ ಹಮಾಸ್ ವಿಷಯಕ್ಕೆ ಬಂದರೆ ಈ ಕಾನೂನು ಅನ್ವಯಿಸುವುದಿಲ್ಲ. ಇಸ್ರೇಲ್ ತಾನು ಆಕ್ರಮಿಸಿಕೊಂಡಿರುವ ಪ್ರದೇಶದಿಂದ, ಅಥವಾ ನಿರಂತರ ಆಕ್ರಮಣಕ್ಕೆ ಒಳಗಾದ ಪ್ರದೇಶದಿಂದ ಅಪಾಯ ಎಂದು ಹೇಳಿಕೊಂಡು ಸ್ವರಕ್ಷಣೆಯ ಹಕ್ಕನ್ನು ಪಡೆಯಲು ಸಾಧ್ಯವಾಗದು' ಎಂದು ಹೇಳಿದ್ದಾರೆ.

`ಕಾನೂನು ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸಲು, ದಾಳಿಯನ್ನು ಹಿಮ್ಮೆಟ್ಟಿಸಲು, ದಾಳಿ ನಡೆಸುತ್ತಿರುವವರನ್ನು ತಟಸ್ಥಗೊಳಿಸಲು ಮತ್ತು ಆ ಬಳಿಕ ಕಾನೂನಿನ ಪ್ರಕಾರ ಮುಂದುವರಿಯಲು ಇಸ್ರೇಲ್ಗೆ ಅವಕಾಶವಿದೆ, ಯುದ್ಧ ನಡೆಸಲು ಅಲ್ಲ. ಆದರೆ ಗಾಝಾದ ಮೇಲೆ ಇಸ್ರೇಲ್ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ' ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News