ಇಸ್ರೇಲ್ ಭಯೋತ್ಪಾದಕ ರಾಷ್ಟ್ರ: ಟರ್ಕಿ ಅಧ್ಯಕ್ಷ ಎರ್ಡೋಗನ್
Update: 2023-11-15 17:12 GMT
ಅಂಕಾರ: ಗಾಝಾದಲ್ಲಿ ಯುದ್ಧಾಪರಾಧ ಎಸಗುತ್ತಿರುವ ಮತ್ತು ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿರುವ ಇಸ್ರೇಲ್ ಭಯೋತ್ಪಾದಕ ರಾಷ್ಟ್ರವಾಗಿದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಬುಧವಾರ ಹೇಳಿಕೆ ನೀಡಿದ್ದಾರೆ.
ಟರ್ಕಿ ಸಂಸತ್ ನಲ್ಲಿ ಮಾತನಾಡಿದ ಎರ್ಡೋಗನ್ `ಫೆಲೆಸ್ತೀನೀಯರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಹಮಾಸ್ ಕಾರ್ಯಕರ್ತರು, ಫೆಲೆಸ್ತೀನೀಯರಿಂದ ಚುನಾಯಿತಗೊಂಡಿರುವ ರಾಜಕೀಯ ಪಕ್ಷ' ಎಂದು ಪುನರುಚ್ಚರಿಸಿದ್ದಾರೆ. ಇಸ್ರೇಲ್ ಪರಮಾಣು ಬಾಂಬ್ ಹೊಂದಿದೆಯೇ ಎಂಬುದನ್ನು ಆ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾತು ಘೋಷಿಸಬೇಕು. ನೆತನ್ಯಾಹು ತಮ್ಮ ಹುದ್ದೆಯಿಂದ ನಿರ್ಗಮಿಸುವ ಹಂತದಲ್ಲಿದ್ದಾರೆ ಎಂದು ಎರ್ಡೋಗನ್ ಹೇಳಿದ್ದಾರೆ.