ಇಸ್ರೇಲ್‌ನ ಕಡ್ಡಾಯ ಮಿಲಿಟರಿ ಸೇವೆ ನಿಯಮ ಪಾಲಿಸಲು ನಿರಾಕರಿಸಿದ ಯುವಕನಿಗೆ ಜೈಲು ಶಿಕ್ಷೆ; ವರದಿ

Update: 2023-12-30 11:36 GMT

ಸಾಂದರ್ಭಿಕ ಚಿತ್ರ (PTI)

ಜೆರುಸಲೆಂ: ಇಸ್ರೇಲ್‌ ಮಿಲಿಟರಿ ಸೇವೆಯಾದ ಇಸ್ರೇಲ್‌ ಡಿಫೆನ್ಸ್‌ ಸರ್ವಿಸಸ್‌ಗೆ ಕಡ್ಡಾಯ ಸೇವೆ ಸಲ್ಲಿಸುವ ನಿಯಮಕ್ಕೆ ಬದ್ಧರಾಗಲು ರಾಜಕೀಯ ಕಾರಣಗಳಿಗಾಗಿ ಇಸ್ರೇಲ್‌ನ ಯುವಕರು ನಿರಾಕರಿಸುತ್ತಿದ್ದಾರೆ. ಗಾಝಾ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿ ಹಾಗೂ ಫೆಲೆಸ್ತೀನಿ ಪ್ರದೇಶಗಳ ಅದರ ನಿಯಂತ್ರಣವನ್ನು ವಿರೋಧಿಸಿ ಯುವಜನತೆ ಮಿಲಿಟರಿ ಸೇವೆ ಸಲ್ಲಿಸಲು ನಿರಾಕರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಹೀಗೆ ನಿರಾಕರಿಸಿದ್ದಕ್ಕಾಗಿ ಬಂಧಿಸಲ್ಪಟ್ಟ ಮೊದಲ ಇಸ್ರೇಲಿ ಯುವಕ ತಲ್‌ ಮಿತ್ನಿಕ್‌ (18) ಆಗಿದ್ದಾನೆ. ಆತನಿಗೆ ಮಂಗಳವಾರ 30 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು ಆತನನ್ನು ಮಿಲಿಟರಿ ಕಾರಾಗೃಹದಲ್ಲಿರಿಸಲಾಗಿದೆ.

ಹಲವು ವಾರಗಳ ಹಿಂದೆ ಮಿಲಿಟರಿ ಸೇವೆಗೆ ಸೇರಲು ಆತ ನಿರಾಕರಿಸಿದ್ದರಿಂದ ಆತನ ವಿರುದ್ಧ ವಿಚಾರಣೆ ಆರಂಭಗೊಂಡಿತ್ತು.

ತನ್ನ ನಿರಾಕರಣೆಗೆ ಆತ ಲಿಖಿತ ಕಾರಣ ನೀಡಿದ್ದ. “ಹಮಾಸ್‌ ಅಥವಾ ಇಸ್ರೇಲ್‌ನಿಂದ ಹಿಂಸೆಯು ಸಮಸ್ಯೆಯನ್ನು ಪರಿಹರಿಸದು, ರಾಜಕೀಯ ಸಮಸ್ಯೆಗೆ ಮಿಲಿಟರಿ ಪರಿಹಾರವಿಲ್ಲ. ನೋವು ನೀಡುವುದನ್ನು ಮುಂದುವರಿಸಿರುವ ಸರ್ಕಾರದ ಅಡಿಯಲ್ಲಿ ನೈಜ ಸಮಸ್ಯೆಯನ್ನು ನಿರ್ಲಕ್ಷಿಸಬಹುದು ಎಂದು ನಂಬಿರುವ ಸೇನೆಗೆ ಸೇರಲು ನಾನು ನಿರಾಕರಿಸುತ್ತೇನೆ,” ಎಂದು ಆತ ವಿವರಣೆ ನೀಡಿದ್ದಾನೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News