ಸಿರಿಯಾದಲ್ಲಿ ಇಸ್ರೇಲ್ ದಾಳಿ: ಇರಾನಿನ ಹಿರಿಯ ಜನರಲ್ ಮೃತ್ಯು

Update: 2023-12-26 18:10 GMT

ರಝಿ ಮೌಸಾವಿ | Photo: NDTV 

ದಮಾಸ್ಕಸ್: ಸಿರಿಯಾ ರಾಜಧಾನಿ ದಮಾಸ್ಕಸ್ ನ ಹೊರವಲಯದ ಝೀನಬಿಯಾ ಜಿಲ್ಲೆಯಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(IRGC)ಯ ಹಿರಿಯ ಜನರಲ್ ಮೃತಪಟ್ಟಿರುವುದಾಗಿ ಇರಾನಿನ ಸರಕಾರಿ ಸ್ವಾಮ್ಯದ `ಇರ್ನಾ' ಸುದ್ಧಿಸಂಸ್ಥೆ ವರದಿ ಮಾಡಿದೆ.

ಐಆರ್ಜಿಸಿಯ ವಿದೇಶಿ ಅಂಗಸಂಸ್ಥೆ `ಕುಡ್ಸ್ ಫೋರ್ಸ್'ನ ಅತ್ಯಂತ ಅನುಭವಿ ಸಲಹೆಗಾರರಾಗಿದ್ದ ರಝಿ ಮೌಸಾವಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಈ ಕೃತ್ಯಕ್ಕೆ ಪ್ರತೀಕಾರ ತೀರಿಸುವುದಾಗಿ ಐಆರ್ಜಿಸಿ ಘೋಷಿಸಿದೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೌಸಾವಿಯ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದು `ಈ ಅಪರಾಧಕ್ಕೆ ಇಸ್ರೇಲ್ ಖಂಡಿತವಾಗಿಯೂ ಬೆಲೆ ತೆರುತ್ತದೆ' ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News