ಹಮಾಸ್ ಮುಖ್ಯಸ್ಥ ಸಿನ್ವರ್ ಮನೆ ಸುತ್ತುವರಿದ ಇಸ್ರೇಲ್ ಪಡೆ: ವರದಿ

Update: 2023-12-06 17:08 GMT

ಯಾಹ್ಯಾ ಸಿನ್ವರ್ (PTI)

ಗಾಝಾ: ತನ್ನ ಸಶಸ್ತ್ರ ಪಡೆಗಳು ಗಾಝಾಪಟ್ಟಿಯ ಖಾನ್‍ಯೂನಿಸ್ ನಗರದಲ್ಲಿ ಹಮಾಸ್‍ನ ಗಾಝಾ ಮುಖ್ಯಸ್ಥ ಯಾಹ್ಯಾ ಸಿನ್ವರ್ ಮನೆಯನ್ನು ಸುತ್ತುವರಿದಿವೆ ಎಂದು ಇಸ್ರೇಲ್ ರಕ್ಷಣಾ ಪಡೆ ಬುಧವಾರ ಹೇಳಿದೆ.

ಆದರೆ ಖಾನ್ ಯೂನಿಸ್‍ನಲ್ಲಿರುವ ಕಟ್ಟಡದಲ್ಲಿ ಸಿನ್ವರ್ ಇರುವ ಬಗ್ಗೆ ಯಾವುದೇ ಸುಳಿವಿಲ್ಲ ಎಂದು ಇಸ್ರೇಲ್ ಹೇಳಿದೆ. ಈ ಮಧ್ಯೆ, ಗಾಝಾದಲ್ಲಿ ನಾಗರಿಕರ ವಾಸಸ್ಥಾನದ ಹೃದಯಭಾಗದಲ್ಲಿ ಬೃಹತ್ ಶಸ್ತ್ರಾಸ್ತ್ರ ಗೋದಾಮು ಪತ್ತೆಯಾಗಿದ್ದು ಇದರಲ್ಲಿ ನೂರಾರು ಆರ್‍ಪಿಜಿ ಕ್ಷಿಪಣಿಗಳು, ವಿವಿಧ ರೀತಿಯ ಲಾಂಚರ್‍ಗಳು, ಟ್ಯಾಂಕ್ ವಿರೋಧಿ ಕ್ಷಿಪಣಿಗಳು, ದೀರ್ಘ ಶ್ರೇಣಿಯ ಮಿಸೈಲ್‍ಗಳು, ಗ್ರೆನೇಡ್‍ಗಳು, ಡ್ರೋನ್‍ಗಳು ಹಾಗೂ ಇತರ ಶಸ್ತ್ರಾಸ್ತ್ರಗಳಿವೆ. ಗಾಝಾದಲ್ಲಿ ಪತ್ತೆಯಾದ ಅತೀ ದೊಡ್ಡ ಶಸ್ತ್ರಾಸ್ತ್ರ ಗೋದಾಮು ಫೆಲೆಸ್ತೀನಿಯನ್ ಪ್ರದೇಶದ ಉತ್ತರದಲ್ಲಿ ವೈದ್ಯಕೀಯ ಕ್ಲಿನಿಕ್ ಮತ್ತು ಶಾಲೆಯೊಂದರ ಪಕ್ಕದಲ್ಲಿತ್ತು ಎಂದು ಇಸ್ರೇಲ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News