ಉತ್ತರ ಗಾಝಾದ ಜಬಲಿಯಾ ಪ್ರದೇಶದ ಮೇಲಿನ ದಾಳಿ | ಇಸ್ರೇಲ್ ಸೇನಾ ಕಮಾಂಡರ್ ಎಹ್ಸಾನ್ ದಕ್ಸಾ ಹತ್ಯೆ

Update: 2024-10-21 18:34 GMT

Photo : middleeasteye.net

ಟೆಲ್ ಅವೀವ್ : ಇಸ್ರೇಲ್‌ ನ 401 ನೇ ಶಸ್ತ್ರಸಜ್ಜಿತ ಬ್ರಿಗೇಡ್‌ ನ ಕಮಾಂಡರ್ ಎಹ್ಸಾನ್ ದಕ್ಸಾ ರವಿವಾರ ಉತ್ತರ ಗಾಝಾದಲ್ಲಿ ಜಬಲಿಯಾ ಪ್ರದೇಶದ ಮೇಲಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಪಡೆ ಘೋಷಿಸಿದೆ.

ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ನಡೆದ ಸೇನಾ ಕಾರ್ಯಾಚರಣೆಯ ವೇಳೆ, ಕರ್ನಲ್ ಎಹ್ಸಾನ್ ದಕ್ಸಾ (41) ಅವರಿದ್ದ ಟ್ಯಾಂಕ್ ಗೆ ಗುರಿಯಾಗಿಸಿ ನಡೆದ ದಾಳಿಯಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ.

ಇದೇ ಘಟನೆಯಲ್ಲಿ ಮತ್ತೊಬ್ಬ ಇಸ್ರೇಲಿ ಸೈನಿಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಕಳೆದ ಒಂದು ವರ್ಷದಿಂದ ಗಾಝಾದ ಮೇಲಿನ ಯುದ್ಧವು ಪ್ರಾರಂಭವಾದಾಗಿನಿಂದ ಕೊಲ್ಲಲ್ಪಟ್ಟ ಅತ್ಯಂತ ಹಿರಿಯ ಇಸ್ರೇಲಿ ಅಧಿಕಾರಿಗಳಲ್ಲಿ ಎಹ್ಸಾನ್ ದಕ್ಸಾ ಒಬ್ಬರು ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.

ದಕ್ಸಾ ಅವರು ಜೂನ್ನಲ್ಲಿ 401 ನೇ ಬ್ರಿಗೇಡ್‌ ನ ಕಮಾಂಡರ್ ಆಗಿ ನೇಮಕಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News