ಪ್ರಾದೇಶಿಕ ಉದ್ವಿಗ್ನತೆಗೆ ಇಸ್ರೇಲ್‍ನ ಯುದ್ಧಾಪರಾಧ ಹೊಣೆ: ಜೋರ್ಡನ್

Update: 2024-01-12 17:10 GMT

ಅಮ್ಮಾನ್ : ಕೆಂಪು ಸಮುದ್ರದಲ್ಲಿನ ಹಿಂಸಾಚಾರ ಮತ್ತು ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಲು ಫೆಲೆಸ್ತೀನೀಯರ ವಿರುದ್ಧದ ಇಸ್ರೇಲ್‍ನ ಯುದ್ಧಾಪರಾಧ ಹೊಣೆಯಾಗಿದೆ ಎಂದು ಜೋರ್ಡಾನ್ ಶುಕ್ರವಾರ ಹೇಳಿದೆ.

ಫೆಲೆಸ್ತೀನೀಯರ ವಿರುದ್ಧದ ಇಸ್ರೇಲ್ ಕಾರ್ಯಾಚರಣೆ ಪ್ರಾದೇಶಿಕ ಭದ್ರತೆಯನ್ನು ಅಪಾಯಕ್ಕೆ ದೂಡಿದ್ದು ಇಸ್ರೇಲ್‍ನ ಕೃತ್ಯವನ್ನು ತಡೆಯಲು ಅಂತರರಾಷ್ಟ್ರೀಯ ಸಮುದಾಯ ವಿಫಲವಾಗಿದೆ ಎಂದು ಜೋರ್ಡನ್ ವಿದೇಶಾಂಗ ಸಚಿವ ಅಯ್ಮಾನ್ ಸಫಾದಿ ಹೇಳಿದ್ದಾರೆ.

ಪ್ರದೇಶದ ಭದ್ರತೆ ಮತ್ತು ಸ್ಥಿರತೆಯ ನಡುವೆ ನಿಕಟ ಸಂಬಂಧವಿದೆ. ಗಾಝಾದಲ್ಲಿ ಇಸ್ರೇಲ್‍ನ ಆಕ್ರಮಣ, ಫೆಲೆಸ್ತೀನೀಯನ್ ಜನರ ವಿರುದ್ಧ ಯುದ್ಧಾಪರಾಧ ಮತ್ತು ಇಸ್ರೇಲ್ ನಿರಂತರವಾಗಿ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿರುವುದು ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಲು ಕಾರಣವಾಗಿದೆ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News