ಜಪಾನ್ | ಬಿಸಿಗಾಳಿಯಿಂದ 6 ಮಂದಿ ಮೃತ್ಯು
Update: 2024-07-09 16:02 GMT
ಟೋಕಿಯೊ : ಅಪರೂಪದ ಮಳೆಗಾಲದ ಬಿಸಿಗಾಳಿಯ ಹೊಡೆತಕ್ಕೆ ಸಿಲುಕಿರುವ ಜಪಾನ್ನುಲ್ಲಿ ಬಿಸಿಗಾಳಿಯಿಂದಾಗಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದು ಅಧಿಕಾರಿಗಳು ಉಷ್ಣ ಹವೆಯ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.
ಈ ವಾರಾಂತ್ಯಕ್ಕೆ ಮಧ್ಯ ಶಿಜುವೊಕಾ ಪ್ರದೇಶದಲ್ಲಿ ತಾಪಮಾನ 40 ಡಿಗ್ರಿ ಸೆಲ್ಶಿಯಸ್ಗೆಿ ತಲುಪಿದ್ದು ಹವಾಮಾನ ಅಧಿಕಾರಿಗಳು ಅತ್ಯಂತ ಬಿಸಿ ಎಂದು ವರ್ಗೀಕರಿಸಿದ 35 ಡಿಗ್ರಿ ಸೆಲ್ಶಿಯಸ್ ಮಿತಿಯನ್ನು ದಾಟಿದೆ. ಜಪಾನ್ನೀ ಮಳೆಗಾಲದ ಸೀಸನ್ನ ಮಧ್ಯಭಾಗದಲ್ಲಿ ಇಂತಹ ತೀವ್ರವಾದ ಶಾಖವು ಅತ್ಯಂತ ಅಪರೂಪದ ವಿದ್ಯಮಾನವಾಗಿದ್ದು ದಕ್ಷಿಣ ಪೆಸಿಫಿಕ್ನರ ಅಧಿಕ ಒತ್ತಡ ಇದಕ್ಕೆ ಪ್ರಮುಖ ಕಾರಣವಾಗಿದೆ.
ಟೋಕಿಯೊ ಮತ್ತು ದಕ್ಷಿಣ ವಕಯಾಮ ಪ್ರಾಂತದಲ್ಲೂ ಸೋಮವಾರ ತಾಪಮಾನ ಬಹುತೇಕ 40 ಡಿಗ್ರಿ ಸೆಲ್ಶಿಯಸ್ನವಷ್ಟಿತ್ತು ಎಂದು ಹವಾಮಾನ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿಷ ಸುದ್ದಿಸಂಸ್ಥೆ ವರದಿ ಮಾಡಿದೆ.