ದಕ್ಷಿಣ ಟರ್ಕಿಯಲ್ಲಿ 5.3 ತೀವ್ರತೆಯ ಭೂಕಂಪ: ಕಟ್ಟಡಗಳಿಗೆ ಹಾನಿ, ಕನಿಷ್ಠ 23 ಜನರಿಗೆ ಗಾಯ
ಇಸ್ತಾಂಬುಲ್: ದಕ್ಷಿಣ ಟರ್ಕಿಯಲ್ಲಿ ಗುರುವಾರ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕಟ್ಟಡಗಳಿಗೆ ಹಾನಿಯಾಗಿದೆ ಹಾಗೂ 23 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರದ ಭೂಕಂಪದ ಪರಿಣಾಮವಾಗಿ ಕನಿಷ್ಠ 23 ಮಂದಿ ಗಾಯಗೊಂಡರು, ಭೂಕಂಪವು ಮಲತ್ಯಾ ಪ್ರಾಂತ್ಯದ ಯೆಸಿಲ್ಯುರ್ಟ್ ಪಟ್ಟಣದಲ್ಲಿ ಕೇಂದ್ರೀಕೃತವಾಗಿತ್ತು ಹಾಗೂ ಅಡಿಯಾಮಾನ್ ನಲ್ಲಿ ಕಂಪನದ ಅನುಭವವಾಯಿತು, ಫೆಬ್ರವರಿಯಲ್ಲಿ ನಡೆದ ವಿನಾಶಕಾರಿ ಭೂಕಂಪಗಳಿಂದ ಎರಡೂ ಪ್ರಾಂತ್ಯಗಳು ತತ್ತರಿಸಿದ್ದು,ಟರ್ಕಿ ಮತ್ತು ಸಿರಿಯಾದಲ್ಲಿ ಕನಿಷ್ಠ 50,000 ಜನರು ಸಾವನ್ನಪ್ಪಿದ್ದರು.
ಕುಸಿದ ಕಟ್ಟಡ ಅವಶೇಷಗಳಡಿ ನಜ್ಜುಗುಜ್ಜಾಗುವುದನ್ನು ತಪ್ಪಿಸಿಕೊಳ್ಳಲು ಜನರು ಕಟ್ಟಡದಿಂದ ಜಿಗಿದ ಪರಿಣಾಮ ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆರೋಗ್ಯ ಸಚಿವ ಫರ್ಹೆಟಿನ್ ಕೊಕಾ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಗುರುವಾರದ ಭೂಕಂಪದ ಪರಿಣಾಮವಾಗಿ ಕಟ್ಟಡಗಳಲ್ಲಿ ಕೆಲವು ಹಾನಿಗಳು ಕಂಡುಬರಬಹುದು ಎಂದು ಖಾಸಗಿ ಪ್ರಸಾರಕ NTV ವರದಿ ಮಾಡಿದೆ