ಭೂಮಿಯತ್ತ ಶರವೇಗದಲ್ಲಿ ಧಾವಿಸುತ್ತಿರುವ ಕ್ಷುದ್ರಗ್ರಹ: ನಾಸಾ ಮಾಹಿತಿ

Update: 2024-09-10 16:30 GMT

PC : NDTV 

ವಾಷಿಂಗ್ಟನ್: ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತ ಶರವೇಗದಲ್ಲಿ ಧಾವಿಸುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾ ಮಾಹಿತಿ ನೀಡಿದೆ.

2024 ಒಎನ್ ಎಂದು ಹೆಸರಿಸಿರುವ ಈ ಕ್ಷುದ್ರಗ್ರಹ 60 ಅಂತಸ್ತಿನ ಕಟ್ಟಡದಷ್ಟು ಅಥವಾ ಸುಮಾರು 2 ಫುಟ್‍ಬಾಲ್ ಮೈದಾನಗಳ ಗಾತ್ರವನ್ನು ಹೊಂದಿದ್ದು ಗಂಟೆಗೆ 40,235 ಕಿ.ಮೀ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದ್ದು 2024ರ ಸೆಪ್ಟಂಬರ್ 15ರಂದು ಭೂಮಿಯ ಅತ್ಯಂತ ನಿಕಟದಲ್ಲಿ ಹಾದುಹೋಗಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

2024ರ ಸೆಪ್ಟಂಬರ್ 5ರಂದು ಜಿ.ಬೊರಿಸೋವ್ ಪತ್ತೆಹಚ್ಚಿರುವ ಕ್ಷುದ್ರಗ್ರಹ ಸೆಪ್ಟಂಬರ್ 15ರಂದು ಭೂಮಿಯ ಸುಮಾರು 6,20,000 ಮೈಲು ಸನಿಹದಲ್ಲಿ ಹಾದುಹೋಗಲಿದೆ. ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬರೇಟರಿ ಕ್ಷುದ್ರಗ್ರಹದ ಪಥವನ್ನು ನಿಕಟವಾಗಿ ಗಮನಿಸುತ್ತಿದೆ. ಇದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಕನಿಷ್ಟವಾಗಿದೆ ಎಂದು ನಾಸಾ ಹೇಳಿ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News