"ನಾನು ಕ್ಷಮೆಯಾಚಿಸುತ್ತೇನೆ": ಇಸ್ರೇಲಿ ಒತ್ತೆಯಾಳುಗಳ ಮೃತದೇಹ ಪತ್ತೆ ಕುರಿತು ನೆತನ್ಯಾಹು ಪ್ರತಿಕ್ರಿಯೆ

Update: 2024-09-03 11:37 GMT

ಬೆಂಜಮಿನ್ ನೆತನ್ಯಾಹು |  PC : PTI 

ಜೆರುಸಲೇಂ: ಗಾಝಾದ ಸುರಂಗದಲ್ಲಿ 6 ಇಸ್ರೇಲಿ ಒತ್ತೆಯಾಳುಗಳ ಮೃತದೇಹ ಪತ್ತೆಯಾಗಿದ್ದು, ಅವರ ಜೀವಗಳನ್ನು ಉಳಿಸಲು ಸಾಧ್ಯವಾಗದಿದ್ದಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕ್ಷಮೆಯಾಚಿಸಿದ್ದಾರೆ.

ದಕ್ಷಿಣ ಗಾಝಾದ ರಾಫಾ ಪ್ರದೇಶದಲ್ಲಿನ ಸುರಂಗದಿಂದ 6 ಒತ್ತೆಯಾಳುಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಮೃತದೇಹಗಳು ಗಾಝಾ ಗಡಿಯ ಸಮೀಪದಲ್ಲಿರುವ ಕಿಬ್ಬುಟ್ಜ್ ಸಮುದಾಯದ ಕಾರ್ಮೆಲ್ ಗ್ಯಾಟ್, ಈಡನ್ ಯೆರುಷಲ್ಮಿ, ಅಲ್ಮೋಗ್ ಸರುಸಿ, ಒರಿ ಡ್ಯಾನಿನೊ ಅವರದ್ದು ಎಂದು ಗುರುತಿಸಲಾಗಿದೆ. ಇವರನ್ನು ಸಂಗೀತ ಉತ್ಸವದ ಸ್ಥಳದಿಂದ ಅಪಹರಿಸಲಾಗಿತ್ತು.

"ಅವರನ್ನು ಜೀವಂತವಾಗಿ ಮರಳಿ ತರದಿದ್ದಕ್ಕಾಗಿ ನಾನು ನಿಮ್ಮ ಕ್ಷಮೆಯನ್ನು ಕೇಳುತ್ತೇನೆ" ಎಂದು ಪ್ರಧಾನಿ ನೆತನ್ಯಾಹು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ನಾವು ಹತ್ತಿರದಲ್ಲಿದ್ದೆವು ಆದರೆ ನಾವು ರಕ್ಷಿಸುವಲ್ಲಿ ಯಶಸ್ವಿಯಾಗಲಿಲ್ಲ. ಇದಕ್ಕೆ ಹಮಾಸ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನೆತನ್ಯಾಹು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News