ಗಾಝಾ ಮರುನಿರ್ಮಾಣದ ವೆಚ್ಚ ನನ್ನ ಸಮಸ್ಯೆಯಲ್ಲ: ಇಸ್ರೇಲ್ ಸಚಿವ
Update: 2024-03-17 18:11 GMT
ಟೆಲ್‍ಅವೀವ್: ಗಾಝಾದ ಮರು ನಿರ್ಮಾಣದ ವೆಚ್ಚ ತನ್ನ ಸಮಸ್ಯೆಯಲ್ಲ ಎಂದು ಇಸ್ರೇಲ್‍ನ ವಿತ್ತ ಸಚಿವ ಬೆಜಲೆಲ್ ಸ್ಮೊಟ್ರಿಚ್ ರವಿವಾರ ಹೇಳಿರುವುದಾಗಿ ವರದಿಯಾಗಿದೆ.
ಅಕ್ಟೋಬರ್ 7ರಂದು ಇಸ್ರೇಲ್ ವಿರುದ್ಧ ಹಮಾಸ್ ಅನಿರೀಕ್ಷಿತ ದಾಳಿ ನಡೆಸಿದ ಬಳಿಕ ಆರಂಭಗೊಂಡಿರುವ ಇಸ್ರೇಲ್-ಹಮಾಸ್ ಯುದ್ಧದಲ್ಲಿ 31,500ಕ್ಕೂ ಅಧಿಕ ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ. ಗಾಝಾದಲ್ಲಿ ಸುಮಾರು 3,50,000 ಮನೆಗಳು ಅಥವಾ ಕಟ್ಟಡಗಳು ಸಂಪೂರ್ಣ ಅಥವಾ ಆಂಶಿಕ ಹಾನಿಗೊಂಡಿವೆ. ಗಾಝಾದಲ್ಲಿ ನಾಶಗೊಂಡ ಮನೆಗಳ ಮರು ನಿರ್ಮಾಣಕ್ಕೆ ಕನಿಷ್ಟ 15 ಶತಕೋಟಿ ಡಾಲರ್ ನಿಧಿಯ ಅಗತ್ಯವಿದೆ. ಆಸ್ಪತ್ರೆಗಳು ಸೇರಿದಂತೆ ಮೂಲಸೌಕರ್ಯಗಳ ಮರು ನಿರ್ಮಾಣದ ವೆಚ್ಚ ಇದರಲ್ಲಿ ಸೇರಿಲ್ಲ ಎಂದು ಕಳೆದ ಜನವರಿಯಲ್ಲಿ ಫೆಲೆಸ್ತೀನ್ ಇನ್ವೆಸ್ಟ್‍ಮೆಂಟ್ ಫಂಡ್ ವರದಿ ಮಾಡಿತ್ತು