ನಿಜ್ಜಾರ್ ಹತ್ಯೆ ಪ್ರಕರಣ | ಮತ್ತೊಬ್ಬ ಭಾರತೀಯನ ಬಂಧನ
Update: 2024-05-12 16:30 GMT
ಒಟ್ಟಾವ : ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಭಾರತೀಯ ಮೂಲದ ಆರೋಪಿಯನ್ನು ಬಂಧಿಸಿರುವುದಾಗಿ ಕೆನಡಾ ಪೊಲೀಸರು ಹೇಳಿದ್ದಾರೆ.
ಬ್ರಾಂಪ್ಟನ್ ನಿವಾಸಿ, 22 ವರ್ಷದ ಅಮನ್‍ದೀಪ್ ಸಿಂಗ್‍ನನ್ನು ಹತ್ಯೆ ಮತ್ತು ಹತ್ಯೆಗೆ ಸಂಚು ಹೂಡಿದ ಆರೋಪ ದಾಖಲಿಸಲಾಗಿದೆ ಎಂದು ಕೆನಡಾದ ಸಂಯೋಜಿತ ನರಹತ್ಯೆ ತನಿಖಾ ತಂಡ ಹೇಳಿದೆ. ಇದರೊಂದಿಗೆ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ನಾಲ್ವರು ಭಾರತೀಯ ಮೂಲದ ಆರೋಪಿಗಳನ್ನು ಕೆನಡಾ ಪೊಲೀಸರು ಬಂಧಿಸಿದಂತಾಗಿದೆ.