ಅಸ್ಸಾಂನ ಉಲ್ಫಾ ಬಂಡಕೋರರಿಗೆ ಪಾಕಿಸ್ತಾನವು ಶಸ್ತ್ರಾಸ್ತ್ರ - ತರಬೇತಿ ನೀಡಿತ್ತು : ಸಂಶೋಧಕ ರಾಜೀವ್ ಭಟ್ಟಾಚಾರ್ಯ

Update: 2024-02-11 17:37 GMT

Photo; NDTV 

ಹೊಸದಿಲ್ಲಿ: 199-92ರಲ್ಲಿ ಉಲ್ಫಾ ಬಂಡುಕೋರರ ಮೊದಲ ತಂಡಕ್ಕೆ ಶಸ್ತ್ರಾಸ್ತ್ರ ಹಾಗೂ ತರಬೇತಿ ಒದಗಿಸಿದ್ದ ಪಾಕಿಸ್ತಾನ, ಈಶಾನ್ಯ ಪ್ರಾಂತ್ಯದಲ್ಲಿ ಅರಾಜಕತೆ ಸೃಷ್ಟಿಸಲು ಅವರನ್ನು ಮರಳಿ ಭಾರತಕ್ಕೆ ವಾಪಸು ಕಳಿಸಿತ್ತು ಎಂದು ತಮ್ಮ ಇತ್ತೀಚಿನ 'The untold story of the outlawed separatist outfit' ಕೃತಿಯ ವಿವರಗಳಲ್ಲಿ ಲೇಖಕ ಹಾಗೂ ಸಂಶೋಧಕ ರಾಜೀವ್ ಭಟ್ಟಾಚಾರ್ಯ ಪ್ರತಿಪಾದಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

1996 ಮತ್ತು 2004ರ ನಡುವೆ ಈಶಾನ್ಯ ಪ್ರಾಂತ್ಯದ ಉಗ್ರಗಾಮಿ ಸಂಘಟನೆಗಳಾಗಿದ್ದ ಎನ್‌ಡಿಎಫ್‌ಬಿ, ಪಿಎಲ್‌ಎ ಹಾಗೂ ಎಟಿಟಿಎಫ್‌ಗಳಿಗೆ ಸೂಕ್ಷ್ಮ ತಂತ್ರಜ್ಞಾನದ ಮೂಲಕ ಬಾಂಬ್ ಜೋಡಣೆ ಮಾಡುವ ಕ್ರಿಯೆಯತ್ತ ಗಮನ ಕೇಂದ್ರೀಕರಿಸಿ ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ತರಬೇತಿ ನೀಡಲಾಗಿತ್ತು ಎಂದು ಈಶಾನ್ಯ ಪ್ರಾಂತ್ಯ, ಮ್ಯಾನ್ಮಾರ್, ಬಾಂಗ್ಲಾದೇಶದಲ್ಲಿ ನೆಲೆಸಿದ್ದ ಉಲ್ಫಾ ನಾಯಕರು, ಬಂಡುಕೋರರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳ ಸಂದರ್ಶನ ನಡೆಸಿ ಹಾಗೂ ಉಲ್ಫಾ ನಾಯಕರ ಪತ್ರಿಕೆಗಳನ್ನು ಆಧರಿಸಿ ರಚಿಸಿರುವ 'ULFA: The Mirage of Dawn' ಅಧ್ಯಾಯದಲ್ಲಿ ಅವರು ಹೇಳಿದ್ದಾರೆ.

"ಈ ಅವಧಿಯಲ್ಲಿ ಅಂದಾಜು ನೂರು ಬಂಡುಕೋರ ಸಂಘಟನೆಗಳಿಗೆ ತರಬೇತಿ ನೀಡಲಾಗಿತ್ತು. ಒಂದು ಉಲ್ಫಾ ತಂಡವನ್ನು ತರಬೇತಿಗಾಗಿ ಅಫ್ಘಾನಿಸ್ತಾನದ ತೋರಾ ಬೋರಾಗೂ ಕರೆದೊಯ್ಯಲಾಗಿತ್ತು. ಬಂಡುಕೋರ ಗುಂಪುಗಳಿಗೆ ಒದಗಿಸಲಾಗಿದ್ದ ಘಟಕಗಳು 17 ದಿನದಿಂದ ಮೂರು ತಿಂಗಳವರೆಗಿನ ವಿಭಿನ್ನ ಕಾಲಾವಧಿಯನ್ನು ಹೊಂದಿದ್ದವು" ಎಂದು ಭಟ್ಟಾಚಾರ್ಯ ತಮ್ಮ ಕೃತಿಯಲ್ಲಿ ನಮೂದಿಸಿದ್ದಾರೆ.

"ಉಲ್ಫಾದ ಮೊದಲ ತಂಡಕ್ಕೆ 1991-92ರ ನಡುವೆ ಸುಮಾರು 40 ಸಂಘಟನೆಗಳ ಮೂರು ಗುಂಪುಗಳಾಗಿಸಿ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿತ್ತು. ಒಂದು ತಂಡಕ್ಕೆ ಪೇಶಾವರದ ಬಳಿ ತರಬೇತಿ ನೀಡಿದರೆ, ಉಳಿದ ಸಂಘಟನೆಗಳನ್ನು ಕಿರು ಭೇಟಿಗಾಗಿ ಅಫ್ಘಾನಿಸ್ತಾನದಲ್ಲಿನ ಕಂದಹಾರ್ ಹಾಗೂ ಪಾಕಿಸ್ತಾನದ ಸಫೇದ್ ಕೋಹ್ ಪವರ್ತ ಶ್ರೇಣಿಯ ಬಳಿಯಿರುವ ದಾರಾ ಆ್ಯಡಮ್ ಖೇಲ್‌ನಲ್ಲಿರುವ ಶಸ್ತ್ರಾಸ್ತ್ರ ಮಾರುಕಟ್ಟೆಗೆ ಕರೆದೊಯ್ಯಲಾಗಿತ್ತು" ಎಂದು ಅವರು ತಮ್ಮ ಕೃತಿಯಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News