ಗಾಝಾದಿಂದ ಯಾವುದೇ ಫೆಲೆಸ್ತೀನೀಯರನ್ನು ಯಾರೂ ಹೊರಹಾಕುತ್ತಿಲ್ಲ: ಡೊನಾಲ್ಡ್ ಟ್ರಂಪ್

Update: 2025-03-13 22:18 IST

PC | NDTV

ವಾಷಿಂಗ್ಟನ್: ಗಾಝಾದಿಂದ ಯಾವುದೇ ಫೆಲೆಸ್ತೀನೀಯರನ್ನು ಯಾರೂ ಹೊರಹಾಕುತ್ತಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಿಹೇಳಿದ್ದಾರೆ.

ಶ್ವೇತಭವನದಲ್ಲಿ ಐರ್‍ಲ್ಯಾಂಡ್ ಪ್ರಧಾನಿ ಮೈಕೆಲ್ ಮಾರ್ಟಿನ್ ಜತೆ ಸಭೆ ನಡೆಸಿದ ಬಳಿಕ ಟ್ರಂಪ್ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು. ವರದಿಗಾರರು ` ಗಾಝಾ ಪಟ್ಟಿಯನ್ನು ವಶಕ್ಕೆ ಪಡೆಯುವ ಟ್ರಂಪ್ ಯೋಜನೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಎಂದು ಐರ್‍ಲ್ಯಾಂಡ್ ಪ್ರಧಾನಿಯನ್ನು ಪ್ರಶ್ನಿಸಿದಾಗ ಮಧ್ಯ ಪ್ರವೇಶಿಸಿದ ಟ್ರಂಪ್ ` ಈ ಯೋಜನೆಯು ಫೆಲೆಸ್ತೀನೀಯರನ್ನು ಹೊರಹಾಕುವುದನ್ನು ಒಳಗೊಂಡಿರುವುದಿಲ್ಲ. ಯಾರೂ ಯಾವುದೇ ಫೆಲೆಸ್ತೀನೀಯರನ್ನೂ ಹೊರಹಾಕುವುದಿಲ್ಲ' ಎಂದು ಉತ್ತರಿಸಿರುವುದಾಗಿ ವರದಿಯಾಗಿದೆ.

ಗಾಝಾ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸುವ ನಿಲುವಿನಿಂದ ಹಿಂದೆ ಸರಿಯುವುದನ್ನು ಸೂಚಿಸುವ ಟ್ರಂಪ್ ಹೇಳಿಕೆಯನ್ನು ಸ್ವಾಗತಿಸುವುದಾಗಿ ಹಮಾಸ್ ಪ್ರತಿಕ್ರಿಯಿಸಿದ್ದು `ಬಲಪಂಥೀಯ ಯೆಹೂದಿಗಳ ದೃಷ್ಟಿಕೋನದ ಜತೆ ಹೊಂದಾಣಿಕೆ ಮಾಡಿಕೊಳ್ಳದಂತೆ ' ಟ್ರಂಪ್‍ರನ್ನು ಆಗ್ರಹಿಸಿದೆ.

ಟ್ರಂಪ್ ಹೇಳಿಕೆಯನ್ನು ಈಜಿಪ್ಟ್ ಶ್ಲಾಘಿಸಿದೆ. ಟ್ರಂಪ್ ಹೇಳಿಕೆಯು ಗಾಝಾದಲ್ಲಿನ ಮಾನವೀಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿರುವುದನ್ನು ತಡೆಯುವ ಅಗತ್ಯತೆ ಮತ್ತು ಫೆಲೆಸ್ತೀನ್ ವಿಷಯಕ್ಕೆ ನ್ಯಾಯಸಮ್ಮತ, ಸುಸ್ಥಿರ ಪರಿಹಾರಗಳನ್ನು ಕಂಡುಹಿಡಿಯುವ ಮಹತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಈಜಿಪ್ಟ್ ವಿದೇಶಾಂಗ ಇಲಾಖೆ ಗುರುವಾರ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News