ಪೋರ್ಚುಗಲ್ | ಏರ್‌ ಶೋ ಸಂದರ್ಭ ವಿಮಾನಗಳ ಡಿಕ್ಕಿ ; ಪೈಲಟ್ ಮೃತ್ಯು

Update: 2024-06-03 15:57 GMT

PC : X/@fl360aero

ಲಿಸ್ಬನ್ : ಪೋರ್ಚುಗಲ್‍ನಲ್ಲಿ ರವಿವಾರ ಏರ್‌ ಶೋ ಸಂದರ್ಭ ಆಗಸದಲ್ಲಿ ಎರಡು ವಿಮಾನಗಳು ಡಿಕ್ಕಿಯಾಗಿದ್ದು ಓರ್ವ ಪೈಲಟ್ ಸಾವನ್ನಪ್ಪಿದ್ದರೆ ಮತ್ತೊಬ್ಬ ಗಂಭೀರ ಗಾಯಗೊಂಡಿರುವುದಾಗಿ ಪೋರ್ಚುಗಲ್‍ನ ವಾಯುಪಡೆಯ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಬೆಜಾ ವಾಯುನೆಲೆಯಲ್ಲಿ ರವಿವಾರ ಆರು ವಿಮಾನಗಳನ್ನು ಒಳಗೊಂಡ ವೈಮಾನಿಕ ಪ್ರದರ್ಶನ, ಕಸರತ್ತು(ಏರ್‌ ಶೋ) ಆಯೋಜಿಸಲಾಗಿತ್ತು. ಈ ಸಂದರ್ಭ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿದ್ದು ಒಂದು ವಿಮಾನ ವಾಯುನೆಲೆಯ ಹೊರಗಡೆ ಪತನಗೊಂಡಿದ್ದರೆ ಮತ್ತೊಂದು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಪೈಲಟ್ ಸಫಲನಾಗಿದ್ದಾನೆ. ಸ್ಪೇನ್ ಮೂಲದ ಪೈಲಟ್ ಸಾವನ್ನಪ್ಪಿದ್ದರೆ ಗಾಯಗೊಂಡ ಪೈಲಟ್ ಪೋರ್ಚುಗಲ್ ನಿವಾಸಿಯೆಂದು ಗುರುತಿಸಲಾಗಿದೆ. ದುರಂತದ ಬಳಿಕ ವೈಮಾನಿಕ ಪ್ರದರ್ಶನವನ್ನು ರದ್ದುಗೊಳಿಸಿರುವುದಾಗಿ ಪೋರ್ಚುಗಲ್ ರಕ್ಷಣಾ ಸಚಿವ ನ್ಯುನೊ ಮೆಲೊ ಹೇಳಿದ್ದಾರೆ.

ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ varthabharati.in ನೋಡ್ತಾ ಇರಿ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News