ಪಾಕಿಸ್ತಾನದಲ್ಲಿ ಭದ್ರತಾ ಪಡೆ ಜತೆ ಪ್ರತಿಭಟನಾಕಾರರ ಘರ್ಷಣೆ: ಮೂವರು ಸಾವು, 28 ಮಂದಿಗೆ ಗಾಯ

Update: 2024-07-29 18:01 GMT

PC : ANI

ಪೇಷಾವರ: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತದಲ್ಲಿ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ನಡೆಸಿದ ಘರ್ಷಣೆಯಲ್ಲಿ ಕನಿಷ್ಟ 3 ಮಂದಿ ಮೃತಪಟ್ಟಿದ್ದು ಸುಮಾರು 29 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಬಲೂಚಿಸ್ತಾನ ಪ್ರಾಂತದ ಜನರ ಹಕ್ಕುಗಳಿಗಾಗಿ ಮತ್ತು ಪ್ರಾಂತದಲ್ಲಿನ ಪ್ರಾಕೃತಿಕ ಸಂಪನ್ಮೂಲದ ಸುರಕ್ಷತೆಗಾಗಿ ಆಗ್ರಹಿಸಿ ಬಲೂಚಿಸ್ತಾನ್ ಯಕ್‍ಜೆತಿ ಸಮಿತಿ(ಬಿವೈಸಿ) ಗ್ವದರ್ ನಗರದಲ್ಲಿ ರವಿವಾರ ಧರಣಿ ಆಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ಪಡೆ ಬ್ಯಾರಿಕೇಡ್‍ಗಳನ್ನು ನಿರ್ಮಿಸಿತ್ತು. ಆದರೂ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಹಲವು ಚೆಕ್‍ಪೋಸ್ಟ್‍ಗಳಲ್ಲಿ ಭದ್ರತಾ ಪಡೆಗಳ ಜತೆ ಘರ್ಷಣೆಗೆ ಇಳಿದರು ಎಂದು ಡಾನ್ ದಿನಪತ್ರಿಕೆ ವರದಿ ಮಾಡಿದೆ.

ಪ್ರತಿಭಟನಾಕಾರರನ್ನು ಚದುರಿಸಲು ಲಾಠಿಜಾರ್ಚ್, ಅಶ್ರುವಾಯು ಪ್ರಯೋಗ ವಿಫಲವಾದಾಗ ರಬ್ಬರ್ ಬುಲೆಟ್‍ಗಳನ್ನು ಭದ್ರತಾ ಪಡೆ ಬಳಸಿದೆ. ಸೋಮವಾರದವರೆಗಿನ ಮಾಹಿತಿಯಂತೆ ಕನಿಷ್ಟ 3 ಮಂದಿ ಸಾವನ್ನಪ್ಪಿದ್ದು ಇತರ 28 ಮಂದಿ ಗಾಯಗೊಂಡಿದ್ದಾರೆ. ಬಲೂಚಿಸ್ತಾನದಿಂದ ಕ್ವೆಟಾ ಮತ್ತು ಗ್ವದರ್‍ನತ್ತ ಸಾಗುವ ರಸ್ತೆ, ಹೆದ್ದಾರಿಗಳನ್ನು ಪ್ರತಿಭಟನಾಕಾರರು ತಡೆದಿದ್ದಾರೆ. ಭದ್ರತಾ ಪಡೆಗಳ ಗೋಲಿಬಾರ್ ಖಂಡಿಸಿ ಮತ್ಸುಂಗ್, ಕಲಾತ್, ನೋಶ್ಕಿ, ದಲ್ಬಾಂದಿನ್, ಲಸ್ಬೆಲಾ, ಚಗಾಯ್, ಟರ್ಬಟ್, ಗ್ವದರ್ ಸೇರಿದಂತೆ ಹಲವು ನಗರಗಳಲ್ಲಿ ಬಂದ್ ಆಚರಿಸಲಾಗಿದೆ. ಬಲೂಚಿಸ್ತಾನ್‍ನಲ್ಲಿ ಇಂಟರ್‍ನೆಟ್ ಸ್ಥಗಿತವನ್ನು ತೆರವುಗೊಳಿಸಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಿಕೊಡುವಂತೆ ಪಾಕಿಸ್ತಾನದ ಅಧಿಕಾರಿಗಳನ್ನು ಆಮ್ನೆಸ್ಟಿ ಇಂಟರ್‍ನ್ಯಾಷನಲ್ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News