ಭಿನ್ನಾಭಿಪ್ರಾಯ ನಿಭಾಯಿಸಲು ಅಮೆರಿಕದ ಜತೆ ಸಹಕಾರಕ್ಕೆ ಸಿದ್ಧ: ಚೀನಾ

Update: 2023-10-25 17:52 GMT

Photo- PTI

ಬೀಜಿಂಗ್: ಎರಡೂ ಕಡೆಯವರು ತಮ್ಮ ಭಿನ್ನಾಭಿಪ್ರಾಯಗಳನ್ನು ನಿಭಾಯಿಸಲು ಮತ್ತು ಜಾಗತಿಕ ಸವಾಲುಗಳಿಗೆ ಪ್ರತಿಕ್ರಿಯಿಸಲು ಒಟ್ಟಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಅಮೆರಿಕದ ಜತೆ ಸಹಕಾರಕ್ಕೆ ಚೀನಾ ಸಿದ್ಧವಿದೆ ಎಂದು ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕ ಮತ್ತು ಚೀನಾ ಜತೆಯಾಗಿ ಸಾಗುವ ಸರಿಯಾದ ದಾರಿಯನ್ನು ಸ್ಥಾಪಿಸಬಹುದೇ ಅಥವಾ ಇಲ್ಲವೇ ಎಂಬುದು ಜಗತ್ತಿಗೆ ನಿರ್ಣಾಯಕವಾಗಿದೆ. ಪರಸ್ಪರ ಗೌರವ, ಶಾಂತಿಯುತ ಸಹಬಾಳ್ವೆ ಮತ್ತು ಉಭಯ ರಾಷ್ಟ್ರಗಳಿಗೂ ಪ್ರಯೋಜನವಾಗುವ ಸಹಕಾರದ ತತ್ವದಡಿ ನಿರ್ಮಿಸಲಾಗುವ ಸ್ಥಿರ ದ್ವಿಪಕ್ಷೀಯ ಸಂಬಂಧದ ಅಗತ್ಯವಿದೆ ಎಂದು ಕ್ಸಿಜಿಂಪಿಂಗ್ ಪ್ರತಿಪಾದಿಸಿದ್ದಾರೆ.

ನವೆಂಬರ್ನಲ್ಲಿ ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ನಡೆಯುವ ಏಶಿಯಾ-ಪೆಸಿಫಿಕ್ ಇಕನಾಮಿಕ್ ಕೋಆಪರೇಷನ್ ಶೃಂಗಸಭೆಯ ನೇಪಥ್ಯದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಕ್ಸಿಜಿಂಪಿಂಗ್ ನಡುವೆ ಮಾತುಕತೆ ನಡೆಯುವ ನಿರೀಕ್ಷೆಯಿದೆ.

ಈ ವಾರ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅಮೆರಿಕಕ್ಕೆ ನೀಡುವ ಭೇಟಿಯು ಉಭಯ ದೇಶಗಳ ಮುಖಂಡರ ನಡುವಿನ ಮಾತುಕತೆಗೆ ವೇದಿಕೆ ರೂಪಿಸಬಹುದು. ಕೆಲವು ವಿಷಯಗಳಲ್ಲಿ ಚೀನಾಕ್ಕೆ ಇರುವ ಕಳವಳವನ್ನು ದೂರಗೊಳಿಸಲು ಅಮೆರಿಕ ಸಶಕ್ತ ಪ್ರಯತ್ನ ನಡೆಸುವ ಅಗತ್ಯವಿದೆ ಮತ್ತು ತನ್ನ ವಿಶ್ವಾಸಾರ್ಹತೆಯನ್ನು ಪ್ರದರ್ಶಿಸಬೇಕಿದೆ' ಎಂದು ಚೀನಾದ ಸರಕಾರಿ ಸ್ವಾಮ್ಯದ `ಗ್ಲೋಬಲ್ ಟೈಮ್ಸ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News