ರಶ್ಯದ ಬಾಂಬರ್ ವಿಮಾನ ಪತನ : ಸಿಬ್ಬಂದಿ ಸಾವು

Update: 2024-06-11 17:34 GMT

ಸಾಂದರ್ಭಿಕ ಚಿತ್ರ | PC : NDTV

ಮಾಸ್ಕೋ: ರಶ್ಯದ ಎಸ್ಯು-34 ಬಾಂಬರ್ ವಿಮಾನ ಕಾಕಸಸ್ ಪರ್ವತ ಪ್ರದೇಶಗಳಲ್ಲಿ ಅಪಘಾತಕ್ಕೆ ಒಳಗಾಗಿದ್ದು ವಿಮಾನದಲ್ಲಿದ್ದ ಸಿಬ್ಬಂದಿ ಮೃತಪಟ್ಟಿರುವುದಾಗಿ ರಕ್ಷಣಾ ಇಲಾಖೆಯನ್ನು ಉಲ್ಲೇಖಿಸಿ ರಶ್ಯದ ಆರ್ಐಎ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

ಉತ್ತರ ಒಸ್ಸೆಟಿಯಾ-ಅಲಾನಿಯಾ ಪ್ರದೇಶದಲ್ಲಿ ವಾಡಿಕೆಯ ತರಬೇತಿ ಹಾರಾಟದಲ್ಲಿದ್ದ ರಶ್ಯ ವಾಯುಪಡೆಯ ಎಸ್ಯು-34 ಬಾಂಬರ್ ವಿಮಾನ ಪತನವಾಗಿದ್ದು ದುರಂತಕ್ಕೆ ತಾಂತ್ರಿಕ ವೈಫಲ್ಯ ಕಾರಣವಾಗಿರಬಹುದು. ಅಪಘಾತದಲ್ಲಿ ವಿಮಾನದಲ್ಲಿದ್ದ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಪಘಾತದ ಪ್ರದೇಶದಲ್ಲಿ ಯಾವುದೇ ಹಾನಿ ಅಥವಾ ನಷ್ಟ ಸಂಭವಿಸಿಲ್ಲ ಎಂದು ವರದಿ ಹೇಳಿದೆ. ವಿಮಾನದಲ್ಲಿ ಎಷ್ಟು ಸಿಬ್ಬಂದಿಗಳಿದ್ದರು ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಸೋವಿಯತ್ ಒಕ್ಕೂಟ ಮೂಲದ ಸೂಪರ್ಸಾನಿಕ್ ಮಧ್ಯಮ ಶ್ರೇಣಿಯ ಬಾಂಬರ್ ವಿಮಾನ ಇದು ಎಂದು ರಶ್ಯದ ತಾಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News