ಸೌದಿ: ಎಂಇಆರ್‌ಎಸ್ ಕೊರೋನ ಸೋಂಕಿನ 3 ಪ್ರಕರಣ ಪತ್ತೆ

Update: 2024-05-11 16:49 GMT

ರಿಯಾದ್: ಎಪ್ರಿಲ್ 10 ಮತ್ತು 17ರ ನಡುವೆ ಮಾರಣಾಂತಿಕ `ಮಿಡ್ಲ್‍ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್(ಎಂಇಆರ್‌ಎಸ್) ಕೊರೋನ ವೈರಸ್‍ನ 3 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಸೌದಿ ಅರೆಬಿಯಾದ ಆರೋಗ್ಯ ಸಚಿವಾಲಯವು ವಿಶ್ವ ಆರೋಗ್ಯ ಸಂಘಟನೆಗೆ ಮಾಹಿತಿ ನೀಡಿದೆ.

ಎಲ್ಲಾ 3 ಪ್ರಕರಣಗಳೂ ರಿಯಾದ್‍ನ 56ರಿಂದ 60 ವರ್ಷದೊಳಗಿನ ಪುರುಷರಲ್ಲಿ ಪತ್ತೆಯಾಗಿದ್ದು ರಿಯಾದ್‍ನಲ್ಲಿ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಸಂಪರ್ಕಿಸಿದ್ದು ರೋಗ ಪ್ರಸರಣದ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಘಟನೆ ಹೇಳಿದೆ. ಈ ವರ್ಷದ ಆರಂಭದಿಂದ 4 ಪ್ರಕರಣ ಹಾಗೂ 2 ಸಾವುಗಳು ಸೌದಿ ಅರೆಬಿಯಾದಲ್ಲಿ ವರದಿಯಾಗಿದೆ. ಎಂಇಆರ್‍ಎಸ್ ಎಂಬುದು ಎಂಇಆರ್‍ಎಸ್ ಕೊರೋನ ವೈರಸ್‍ನಿಂದ ಉಂಟಾಗುವ ವೈರಲ್ ಉಸಿರಾಟದ ಸೋಂಕು. ಸೋಂಕು ದೃಢಪಟ್ಟವರಲ್ಲಿ ಸುಮಾರು 36% ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News