ನಗುವ ಮಾನವರೂಪಿ ರೊಬಟ್ ಸೃಷ್ಟಿಸಿದ ವಿಜ್ಞಾನಿಗಳು

Update: 2024-06-30 17:04 GMT

Photo Credit: Cell Reports Physical Science

ಟೋಕಿಯೊ : ಜೀವಂತ ಚರ್ಮವನ್ನು ಹೊಂದಿರುವ, ಏಲಿಯನ್‍ಗಳನ್ನು ಹೋಲುವ ರೊಬಟ್‍ಗಳನ್ನು ಜಪಾನ್‍ನ ವಿಜ್ಞಾನಿಗಳು ಸೃಷ್ಟಿಸಿದ್ದಾರೆ.

ಮಣಿಗಳಂತಿರುವ ಕಣ್ಣುಗಳನ್ನು ಹೊಂದಿರುವ ಈ ಮಾನವರೂಪಿ ರೊಬಟ್‍ಗಳು ನಗಲು ಅನುವು ಮಾಡಿಕೊಡುವ ಜೀವಂತ ಚರ್ಮಗಳನ್ನು ಹೊಂದಿದೆ. ಪ್ರೊಫೆಸರ್ ಶೋಜಿ ಟಕೆಯುಚಿ ನೇತೃತ್ವದ ಸಂಶೋಧಕರ ತಂಡದ ಯಶಸ್ವೀ ಸಂಶೋಧನೆಯನ್ನು ಟೋಕಿಯೊ ವಿವಿ ಘೋಷಿಸಿದೆ.

ಮಾನವನ ಚರ್ಮ- ಅಸ್ಥಿರಜ್ಜು ರಚನೆಗಳನ್ನು ಅನುಕರಿಸುವ ಮೂಲಕ ಮತ್ತು ಘನ ವಸ್ತುಗಳಲ್ಲಿ ವಿಶೇಷವಾಗಿ ತಯಾರಿಸಿದ ವಿ ಆಕಾರದ ರಂಧ್ರಗಳನ್ನು ಬಳಸುವ ಮೂಲಕ ಚರ್ಮವನ್ನು ಸಂಕೀರ್ಣ ರಚನೆಗಳಿಗೆ ಬಂಧಿಸುವ ಮಾರ್ಗವನ್ನು ನಾವು ಕಂಡುಕೊಂಡಿದ್ದೇವೆ. ಚರ್ಮದ ನೈಸರ್ಗಿಕ ನಮ್ಯತೆ(ಫ್ಲೆಕ್ಸಿಬಿಲಿಟಿ) ಮತ್ತು ಅಂಟಿಕೊಳ್ಳುವಿಕೆಯ ಬಲವಾದ ವಿಧಾನವು ಚರ್ಮವು ಹರಿದು ಹೋಗದೆ ರೊಬಟ್‍ನ ಯಾಂತ್ರಿಕ ಘಟಕಗಳೊಂದಿಗೆ ಚಲಿಸಬಹುದು' ಎಂದು ಶೋಜಿ ಟಿಕೆಯುಚಿ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News