ಐರ್ಲ್ಯಾಂಡ್‌ನ ನೂತನ ಪ್ರಧಾನಿಯಾಗಲಿರುವ ಸೈಮನ್‌ ಹ್ಯಾರಿಸ್‌

Update: 2024-03-25 08:29 GMT

Photo: Reuters

ಡಬ್ಲಿನ್: ಐಯರ್ಲ್ಯಾಂಡ್‌ನ ಸೆಂಟರ್-ರೈಟ್‌ ಪಕ್ಷವಾದ ಫೈನ್‌ ಗೇಲ್‌ನ ಮುಖ್ಯಸ್ಥ ಹುದ್ದೆಯಿಂದ ಲಿಯೋ ವರದ್ಕರ್‌ ಅವರ ಅಚ್ಚರಿಯ ನಿರ್ಗಮನದ ನಂತರ ಈ ಹುದ್ದೆಗೇರಿದ ಸೈಮನ್‌ ಹ್ಯಾರಿಸ್, ದೇಶದ ಪ್ರಧಾನಿಯಾಗುವತ್ತ ಹೆಜ್ಜೆ ಹಾಕಿದ್ದಾರೆ.

ಪಕ್ಷದ ಮುಖ್ಯಸ್ಥ ಹುದ್ದೆಗೆ ಏರಲು ಅವರಿಗೆ ಯಾವುದೇ ಪ್ರತಿಸ್ಪರ್ಧಿಗಳಿರಲಿಲ್ಲ. ಮೂವತ್ತೇಳು ವರ್ಷದ ಸೈಮನ್‌ ಪ್ರಧಾನಿ ಹುದ್ದೆಗೇರಿದ್ದೇ ಆದಲ್ಲಿ ಈ ಹುದ್ದೆ ಪಡೆದ ದೇಶದ ಅತ್ಯಂತ ಕಿರಿಯ ವ್ಯಕ್ತಿ ಅವರಾಗಲಿದ್ದಾರೆ. ದೇಶದಲ್ಲಿ ಸಂಸದೀಯ ಚುನಾವಣೆಗೆ ಒಂದು ವರ್ಷ ಕೂಡ ಉಳಿದಿಲ್ಲ.

ಗೇಲ್‌ ಅವರ ಎಡ ಪಂಥೀಯ ಎದುರಾಳಿ ಸಿನ್ನ್‌ ಫೀನ್‌ ಅವರು ಸಮೀಕ್ಷೆಗಳಲ್ಲಿ ಮುಂದಿನ ಸ್ಥಾನದಲ್ಲಿದ್ದಾರೆ. ಉತ್ತರ ಐಯರ್ಲ್ಯಾಂಡ್‌ ಜೊತೆ ವಿಲೀನಕ್ಕೆ ಅವರ ಪಕ್ಷ ಪರವಾಗಿದೆ.

2020ರಿಂದ ಐಯರ್ಲ್ಯಾಂಡ್‌ ದೇಶದಲ್ಲಿ ಫೈನ್‌ ಗೇಲ್‌, ಕನ್ಸರ್ವೇಟಿವ್‌ ಫಿಯಾನ್ನ ಫೈಲ್‌, ದಿ ಗ್ರೀನ್ಸ್‌ ಹಾಗೂ ಹಲವು ಸ್ವತಂತ್ರ ಅಭ್ಯರ್ಥಿಗಳ ಬೆಂಬಲದೊಂದಿಗೆ ಆಡಳಿತ ನಡೆಸುತ್ತಿದೆ.

ಸೈಮನ್‌ ಅವರು 2016ರಿದ 2020 ಮಧ್ಯಭಾಗದವರೆಗೆ ದೇಶದ ಆರೋಗ್ಯ ಸಚಿವರಾಗಿ ಕೋವಿಡ್‌ ಸಾಂಕ್ರಾಮಿಕದ ಸಂದರ್ಭ ಯಶಸ್ವಿ ಕ್ರಮಗಳನ್ನು ಕೈಗೊಂಡಿದ್ದರು. ನಂತರ ಅವರು ಕಾನೂನು ಸಚಿವರಾಗಿ, ಉನ್ನತ ಶಿಕ್ಷಣ ಹಾಗೂ ವಿಜ್ಞಾನ ಸಚಿವರಾಗಿ ಸೇವೆ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News