ಹೈಬ್ರೀಡ್ ಅಕ್ಕಿ ಸಂಶೋಧಿಸಿದ ದಕ್ಷಿಣ ಕೊರಿಯಾ ವಿಜ್ಞಾನಿಗಳು

Update: 2024-02-16 22:56 IST
ಹೈಬ್ರೀಡ್ ಅಕ್ಕಿ ಸಂಶೋಧಿಸಿದ ದಕ್ಷಿಣ ಕೊರಿಯಾ ವಿಜ್ಞಾನಿಗಳು

Photo credit: SCMPOST/Yonsei University

  • whatsapp icon

ಸಿಯೋಲ್: ಆಹಾರ ಬಿಕ್ಕಟ್ಟು ಮತ್ತು ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವ ಹೊಸ ರೀತಿಯ ಸುಸ್ಥಿರ ಹೈಬ್ರೀಡ್ ಆಹಾರ `ಮಾಂಸಭರಿತ' ಅಕ್ಕಿಯನ್ನು ದಕ್ಷಿಣ ಕೊರಿಯಾದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಹೊಸ ಹೈಬ್ರಿಡ್ ಧಾನ್ಯವನ್ನು ಸಿಯೋಲ್‍ನ ಯೋನ್ಸೆ ವಿವಿಯ ಪ್ರಯೋಗಾಲಯದಲ್ಲಿ ಸಂಶೋಧಕರು ಅಭಿವೃದ್ಧಿಪಡಿಸಿದ್ದು ಇದು ಜಾನುವಾರುಗಳ ಮಾಂಸದ ಸ್ನಾಯು ಅಂಗಾಂಶ ಮತ್ತು ಕೊಬ್ಬಿನ ಕೋಶಗಳಿಂದ ಕೂಡಿರುತ್ತದೆ. ಇದು ಗುಲಾಬಿ ಬಣ್ಣದ ಅಕ್ಕಿಯಾಗಿದ್ದು ಅಗ್ಗದ ಮತ್ತು ಪರಿಸರ ಸಮರ್ಥನೀಯ ಪರ್ಯಾಯ ಆಹಾರವಾಗಿದ್ದು ಆಹಾರ ಬಿಕ್ಕಟ್ಟಿಗೆ ಪರಿಹಾರವಾಗಲಿದೆ. ಅಕ್ಕಿಯು ಮೊದಲೇ ಹೆಚ್ಚಿನ ಪೋಷಕಾಂಶ ಮಟ್ಟವನ್ನು ಹೊಂದಿದೆ. ಜಾನುವಾರುಗಳ ಕೋಶಗಳ ಅಂಶವನ್ನು ಸೇರಿಸುವುದರಿಂದ ಪೋಷಕಾಂಶದ ಪ್ರಮಾಣ ಹೆಚ್ಚಲಿದೆ. ಹೈಬ್ರೀಡ್ ಅಕ್ಕಿಯು ಸಾಮಾನ್ಯ ಅಕ್ಕಿಗಿಂತ 8 ಪ್ರತಿಶತ ಹೆಚ್ಚು ಪ್ರೊಟೀನ್ ಮತ್ತು 7 ಪ್ರತಿಶತ ಹೆಚ್ಚು ಕೊಬ್ಬನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಬರಪೀಡಿತ ಪ್ರದೇಶಗಳಲ್ಲಿ, ಸೇನೆಯ ಪಡಿತರ ವ್ಯವಸ್ಥೆಯಲ್ಲಿ , ಬಾಹ್ಯಾಕಾಶದಲ್ಲಿ ಪರ್ಯಾಯ ಆಹಾರವಾಗಿ ಈ ಹೈಬ್ರೀಡ್ ಧಾನ್ಯ ಬಳಕೆಗೆ ಬರುವ ವಿಶ್ವಾಸವಿದೆ ಎಂದು ಸಂಶೋಧನಾ ತಂಡದ ಸದಸ್ಯೆ ಪಾರ್ಕ್ ಸೊ-ಹಿಯೊನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News