ಕ್ಯಾಂಪಸ್ ಪ್ರತಿಭಟನೆ ಕುರಿತ ಬೈಡನ್ ಹೇಳಿಕೆಗೆ ವಿದ್ಯಾರ್ಥಿಗಳ ಖಂಡನೆ

Update: 2024-05-03 16:09 GMT

ಜೋ ಬೈಡೆನ್ | PC : PTI

ವಾಷಿಂಗ್ಟನ್: ವಿವಿಗಳ ಕ್ಯಾಂಪಸ್‍ನಲ್ಲಿ ಶಿಸ್ತು, ಕಾನೂನನ್ನು ಎತ್ತಿಹಿಡಿಯುವ ಅಗತ್ಯವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ನೀಡಿರುವ ಹೇಳಿಕೆಯನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಖಂಡಿಸಿದ್ದಾರೆ.

ವಾಕ್‍ಸ್ವಾತಂತ್ರ್ಯ ಮತ್ತು ಕಾನೂನಿನ ಪರಿಪಾಲನೆ ಎರಡೂ ಅಗತ್ಯವಿದೆ. ಆದರೆ ಹಿಂಸಾತ್ಮಕ ರೀತಿಯ ಪ್ರತಿಭಟನೆಯನ್ನು ಒಪ್ಪಿಕೊಳ್ಳಲಾಗದು ಎಂದು ಗುರುವಾರ ಸುದ್ಧಿಗೋಷ್ಟಿಯಲ್ಲಿ ಬೈಡನ್ ಹೇಳಿಕೆ ನೀಡಿದ್ದರು. ಆ ಬಳಿಕ ವಿವಿಗಳ ಕ್ಯಾಂಪಸ್‍ಗೆ ನುಗ್ಗಿದ್ದ ಪೊಲೀಸರು ಪ್ರತಿಭಟನಾಕಾರರು ಸ್ಥಾಪಿಸಿದ್ದ ತಾತ್ಕಾಲಿಕ ಟೆಂಟ್‍ಗಳನ್ನು ತೆರವುಗೊಳಿಸಿ ಹಲವರನ್ನು ಬಂಧಿಸಿದ್ದರು. ಬೈಡನ್ ಹೇಳಿಕೆಯನ್ನು ಖಂಡಿಸಿರುವ ವಿದ್ಯಾರ್ಥಿಗಳು `ಅಮೆರಿಕದ ಕಾಲೇಜು ಹಾಗೂ ವಿವಿಗಳ ಮನಸ್ಥಿತಿಯನ್ನು ಅರಿಯುವಲ್ಲಿ ಬೈಡನ್ ವಿಫಲವಾಗಿದ್ದಾರೆ' ಎಂದು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News