“ನಿಮ್ಮ ಕೈಗಳಲ್ಲಿ ರಕ್ತವಿದೆ”: ಮೆಟಾ ಸಿಇಒ ಮಾರ್ಕ್ ಝುಕರ್ ಬರ್ಗ್ ವಿರುದ್ಧ ಸೆನೆಟರ್ ಲಿಂಡ್ಸೆ ಗ್ರಹಾಂ ಆಕ್ರೋಶ
ವಾಷಿಂಗ್ಟನ್: ಆನ್‌ಲೈನ್‌ನಲ್ಲಿ ಮಕ್ಕಳನ್ನು ಸೂಕ್ತವಾಗಿ ರಕ್ಷಿಸಲು ವಿಫಲರಾಗಿದ್ದಾರೆಂಬ ಆರೋಪ ಎದುರಿಸುತ್ತಿರುವ ಮೆಟಾ ಸಿಇಒ ಮಾರ್ಕ್ ಝುಕರ್ ಬರ್ಗ್ ಸಹಿತ ಇತರ ಸಾಮಾಜಿಕ ಜಾಲತಾಣ ಸಂಸ್ಥೆಗಳ ಮುಖಂಡರು ಬುಧವಾರ ಕಾಂಗ್ರೆಶನಲ್ ವಿಚಾರಣೆ ವೇಳೆ ಅಮೆರಿಕ ಸಂಸದರಿಂದ ತೀವ್ರ ತರಾಟೆಗೊಳಗಾಗದರು.
ಫೇಸ್ ಬುಕ್, ಇನ್‌ಸ್ಟಾಗ್ರಾಂ ಮತ್ತು ಡಿಸ್ಕಾರ್ಡ್‌ನಲ್ಲಿ ಲೈಂಗಿಕ ಶೋಷಣೆಗೊಳಗಾದವರ ಕಳವಳಕಾರಿ ವೀಡಿಯೋಗಳ ಪ್ರದರ್ಶನದೊಂದಿಗೆ ವಿಚಾರಣೆಯನ್ನು ಸೆನೆಟ್ ನ್ಯಾಯಾಂಗ ಸಮಿತಿ ಆರಂಭಿಸಿತು.
“ನಿಮ್ಮ ಕೈಗಳಲ್ಲಿ ರಕ್ತವಿದೆ,” ಎಂದು ಸೆನೆಟರ್ ಲಿಂಡ್ಸೆ ಗ್ರಹಾಂ ಅವರು ಝುಕರ್ ಬರ್ಗ್ ಅವರಿಗೆ ಹೇಳಿದರು ಹಾಗೂ ಮೆಟಾ ಉತ್ಪನ್ನಗಳು “ಜನರನ್ನು ಕೊಲ್ಲುತ್ತಿವೆ,” ಎಂದು ದೂರಿದರು.
ಸಮಿತಿ ಅಧ್ಯಕ್ಷ, ಇಲ್ಲಿನಿಯೋಸ್‌ನ ಸೆನೆಟರ್ ಡಿಕ್ ಡರ್ಬಿನ್ ಅವರು ಸಾಮಾಜಿಕ ಜಾಲತಾಣ ಸಂಶ್ಥೆಗಳನ್ನು ಟೀಕಿಸಿದರಲ್ಲದೆ. ಡಿಸ್ಕಾರ್ಡ್ ಮೂಲಕ ಮಕ್ಕಳನ್ನು ಶೋಷಿಸಲು ಅವರ ಸ್ನೇಹ ಸಂಪಾದಿಸುವುದು, ಮೆಟಾ ಇನ್‌ಸ್ಟಾಗ್ರಾಂನಲ್ಲಿ ಬಾಲಕಾಮಿಗಳ ಜಾಲಕ್ಕೆ ಅನುವು ಮಾಡಿಕೊಟ್ಟಿರುವುದು ಹಾಗೂ ಸ್ನ್ಯಾಪ್‌ಚಾಟ್‌ನ ಡಿಸಪೀಯರಿಂಗ್ ಮೆಸೇಜ್‌ಗಳನ್ನು ಹಣಕ್ಕೆ ಬೇಡಿಕೆಯಿರಿಸಲು ಲೈಂಗಿಕ ವಿಚಾರಗಳನ್ನು ಬಳಸಿಕೊಳ್ಳುತ್ತಿರುವ ನಿದರ್ಶನ ನೀಡಿದರು.
ಡಿಸ್ಕಾರ್ಡ್‌ನ ಸಿಇಒ ಜೇಸನ್ ಸಿಟ್ರೊನ್ ತಮ್ಮ ಸಂಸ್ಥೆ ಮಕ್ಕಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು ಹಾಗೂ ಇದನ್ನು ಇನ್ನಷ್ಟು ಹೆಚ್ಚಿಸುವ ಭರವಸೆ ನೀಡಿದರು. 2023ರಲ್ಲಿ ಮಕ್ಕಳ ಸುರಕ್ಷತೆಗಾಗಿ 5 ಬಿಲಿಯನ್ ಡಾಲರ್ ವೆಚ್ಚ ಮಾಡಿರುವುದಾಗಿ ಮೆಟಾ ಹೇಳಿದರೆ, ಈ ಸಮಸ್ಯೆ ಪರಿಹಾರಕ್ಕೆ 2024ರಲ್ಲಿ 2 ಬಿಲಿಯನ್ ಡಾಲರ್ ಮೀಸಲಿಡುವುದಾಗಿ ಟಿಕ್ ಟಾಕ್ ಹೇಳಿದೆ.
ಫೇಸ್ಬುಕ್ ಮತ್ತು ಹದಿಹರೆಯದವರ ಮಾನಸಿಕ ಸಮಸ್ಯೆಗಳ ನಡುವೆ ನೇರ ನಂಟನ್ನು ಝುಕರ್ ಬರ್ಗ್ ನಿರಾಕರಿಸಿದರಲ್ಲದೆ ಇಂತಹ ನಂಟಿನ ಬಗ್ಗೆ ವೈಜ್ಞಾನಿಕ ಪುರಾವೆಗಳಿಲ್ಲ ಎಂದರು. ಹೆಚ್ಚಿನ ಪ್ರಕರಣಗಳಲ್ಲಿ ಈ ನಂಟು ಇಲ್ಲ ಆದರೆ ಕೆಲವೊಂದು ನಿದರ್ಶನಗಳಲ್ಲಿ ಇರಬಹುದು ಎಂದು ನಂತರ ಅವರು ಒಇಪ್ಪಿಕೊಂಡರು.
ಟಿಕ್‌ಟಾಕ್‌ನಲ್ಲಿ 13 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಿಗೆ ಇರುವ ನಿಷೇಧವನ್ನು ಸಂಸ್ಥೆಯ ಸಿಇಒ ಶೌ ಝಿ ಚ್ಯು ಪುನುರುಚ್ಚರಿಸಿದರು.
ಸ್ನ್ಯಾಪ್ ಸಿಇಒ ಇವಾನ್ ಸ್ಪೀಗೆಲ್ ಅವರು ತಮ್ಮ ಪ್ಲ್ಯಾಟ್‌ಫಾರ್ಮ್ ಮೂಲಕ ಫೆಂಟನೈಲ್ ಖರೀದಿಸಿ ಅವುಗಳ ಓವರ್‌ಡೋಸ್‌ನಿಂದ ಸಮಸ್ಯೆ ಎದುರಿಸಿದ ಮಕ್ಕಳ ಹೆತ್ತವರಲ್ಲಿ ಕ್ಷಮೆ ಕೋರಿದರು.
ಅಪ್ರಾಪ್ತರಿಗೆ ಹಾನಿಕಾರಕ ವಿಷಯಗಳನ್ನು ಶಿಫಾರಸು ಮಾಡಿದಲ್ಲಿ ಆಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಕಾನೂನು ಕ್ರಮ ಎದುರಿಸುವ ಪ್ರಸ್ತಾವಿತ ಮಸೂದೆಗೆ ಸ್ಪೀಗೆಲ್ ಬೆಂಬಲ ವ್ಯಕ್ತಪಡಿಸಿದರು.
ಕೆಲ ರಿಪಬ್ಲಿಕನ್ ಸೆನೆರ್‌ಗಳು ಟಿಕ್‌ಟಾಕ್ ಚೀನಾ ಪರವಾಗಿದೆ ಎಂದು ಆರೋಪ ಹೊರಿಸಿದರು.