ರಶ್ಯಾದ ಚಂದ್ರಯಾನ ವೈಫಲ್ಯದ ಬೆನ್ನಲ್ಲೇ ಹಿರಿಯ ವಿಜ್ಞಾನಿ ಆಸ್ಪತ್ರೆಗೆ ದಾಖಲು
Update: 2023-08-22 07:17 GMT
ಮಾಸ್ಕೋ: ಚಂದ್ರನ ಮೇಲೆ ಕಾಲಿಡಲು ಅತ್ಯುತ್ಸಾಹದಲ್ಲಿದ್ದ ರಶ್ಯಾದ ಲೂನಾ-25 ಮಿಷನ್ ಇತ್ತೀಚೆಗೆ ಲ್ಯಾಂಡಿಂಗ್ ಪೂರ್ವ ಪ್ರಕ್ರಿಯೆಗಳ ವೇಳೆ ವಿಫಲಗೊಂಡ ಬೆನ್ನಲ್ಲೇ ಈ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ರಶ್ಯಾದ ಹಿರಿಯ ಭೌತವಿಜ್ಞಾನಿ, 90 ವರ್ಷದ ಮಿಖಾಯಿಲ್ ಮಾರೋವ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಈ ಮಿಷನ್‌ನ ವೈಫಲ್ಯ ಅದೆಷ್ಟು ನಿರಾಶೆ ಮೂಡಿಸಿತೆಂದರೆ ಆರೋಗ್ಯ ಹದಗೆಟ್ಟಿದೆ ಎಂದು ಆಸ್ಪತ್ರೆಯಿಂದ ಸುದ್ದಿಗಾರರ ಜೊತೆ ಮಾತನಾಡಿದ ಮಾರೊವ್ ಹೇಳಿದ್ದಾರೆ.
“ನಾನು ವೈದ್ಯರ ನಿಗಾದಲ್ಲಿದ್ದೇನೆ. ಚಿಂತಿಸದೇ ಇರಲು ಹೇಗೆ ಸಾಧ್ಯ? ಇದು ಜೀವನದ ಪ್ರಶ್ನೆ. ತುಂಬಾ ಕಷ್ಟಕರ,” ಎಂದು ಮಾಸ್ಕೋದ ಕ್ರೆಮ್ಲಿನ್‌ನ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆಯಲ್ಲಿರುವ ಅವರು ಹೇಳಿದರು.
ಅವರು ಈ ಹಿಂದೆ ಸೋವಿಯತ್ ಯೂನಿಯನ್ ಬಾಹ್ಯಾಕಾಶ ಯೋಜನೆಗಳ ಭಾಗವಾಗಿದ್ದರು.