ಟ್ರಂಪ್‌ ಹತ್ಯೆ ಯತ್ನ ಪ್ರಕರಣ: ಭದ್ರತೆಯ ಹೊಣೆ ಹೊತ್ತಿದ್ದ ʼಸೀಕ್ರೆಟ್ ಸರ್ವಿಸ್' ಮುಖ್ಯಸ್ಥೆ ಕಿಂಬರ್ಲಿ ರಾಜೀನಾಮೆ

Update: 2024-07-23 17:01 GMT

ಕಿಂಬರ್ಲಿ ಚಿಯಾಟಲ್ | PC : NDTV 

ವಾಷಿಂಗ್ಟನ್: ಕಳೆದ ವಾರ ನಡೆದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಗುಂಡಿನ ದಾಳಿ ಘಟನೆಯಲ್ಲಿ ಭದ್ರತಾ ವೈಫಲ್ಯವಾಗಿದೆ ಎಂಬ ವ್ಯಾಪಕ ಟೀಕೆಯ ಹಿನ್ನೆಲೆಯಲ್ಲಿ ಟ್ರಂಪ್ ಭದ್ರತೆಯ ಹೊಣೆ ವಹಿಸಿದ್ದ ಸೀಕ್ರೆಟ್ ಸರ್ವಿಸ್(ರಹಸ್ಯ ಗುಪ್ತಚರ ಸೇವೆ) ಮುಖ್ಯಸ್ಥೆ ಕಿಂಬರ್ಲಿ ಚಿಯಾಟಲ್ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.

ಕಳೆದ ವಾರ ಪೆನಿಸಿಲ್ವೇನಿಯಾದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಚುನಾವಣಾ ರ‍್ಯಾಲಿಯಲ್ಲಿ ಭದ್ರತಾ ವ್ಯವಸ್ಥೆ ಸಂಪೂರ್ಣ ವಿಫಲವಾಗಿತ್ತು ಎಂದು ಇಬ್ಬರು ಮಾಜಿ ಎಫ್‌ಬಿಐ ಅಧಿಕಾರಿಗಳ ಸಹಿತ ಹಲವು ಪ್ರಮುಖರು ಟೀಕಿಸಿದ್ದರು. ಘಟನೆಯ ತನಿಖೆ ನಡೆಸುತ್ತಿರುವ ಏಜೆನ್ಸಿಯೂ ಭದ್ರತಾ ಲೋಪದ ಬಗ್ಗೆ ಬೆಟ್ಟು ಮಾಡಿದ ಬಳಿಕ ಕಿಂಬರ್ಲಿ ರಾಜೀನಾಮೆಗೆ ಒತ್ತಡ ಹೆಚ್ಚಿತ್ತು. ಭದ್ರತಾ ಲೋಪದ ಸಂಪೂರ್ಣ ಹೊಣೆಯನ್ನು ವಹಿಸಿಕೊಂಡು ರಾಜೀನಾಮೆ ಸಲ್ಲಿಸಿರುವುದಾಗಿ 2022ರ ಆಗಸ್ಟ್ ನಿಂದ ಸೀಕ್ರೆಟ್ ಸರ್ವಿಸ್‌ನ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಿಂಬರ್ಲಿ ರವಾನಿಸಿರುವ ಇ-ಮೇಲ್ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News