ಅವರು ನಮ್ಮಿಂದ ಚೆನ್ನಾಗಿ ಲಾಭ ಪಡೆದುಕೊಳ್ಳುತ್ತಾರೆ: ಭಾರತಕ್ಕೆ USAID ಧನಸಹಾಯದ ಬಗ್ಗೆ ಟ್ರಂಪ್ ಮತ್ತೆ ಕಳವಳ

Update: 2025-02-23 12:42 IST
Photo of Donald Trump

ಡೊನಾಲ್ಡ್ ಟ್ರಂಪ್ (PTI)

  • whatsapp icon

ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಚುನಾವಣಾ ಪ್ರಕ್ರಿಯೆಗೆ USAID 18 ಮಿಲಿಯನ್ ನಿಧಿ ಹಂಚಿಕೆಯ ಬಗ್ಗೆ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಚುನಾವಣೆಯಲ್ಲಿ ಮತದಾರರ ಭಾಗವಹಿಸುವಿಕೆಯ ಮೇಲೆ ಕೇಂದ್ರೀಕರಿಸುವ ಬದಲು ವಿದೇಶಿಯ ಚುನಾವಣೆಯಲ್ಲಿ ಗಣನೀಯ ಮೊತ್ತವನ್ನು ಖರ್ಚು ಮಾಡುವ ಬಗೆಗಿನ ತಾರ್ಕಿಕತೆಯನ್ನು ಪ್ರಶ್ನಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ʼಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ʼ(ಯುಎಸ್ಎಐಡಿ) ನಿಧಿ ನೀಡುವ ಬಗ್ಗೆ ತಮ್ಮ ವಿರೋಧವನ್ನು ಪುನರುಚ್ಚರಿಸಿದರು. ಅವರು ನಮ್ಮಿಂದ ಚೆನ್ನಾಗಿ ಲಾಭ ಪಡೆದುಕೊಳ್ಳುತ್ತಾರೆ. ಚುನಾವಣೆಗೆ ಭಾರತಕ್ಕೆ ಹಣ ನೀಡುವುದು ಅನಗತ್ಯ, ಏಕೆಂದರೆ ಭಾರತಕ್ಕೆ ಆರ್ಥಿಕ ನೆರವು ಅಗತ್ಯವಿಲ್ಲ. ಭಾರತವು ಅಮೆರಿಕದಿಂದ ಲಾಭವನ್ನು ಪಡೆದುಕೊಳ್ಳುತ್ತದೆ ಮತ್ತು ಜಾಗತಿಕವಾಗಿ ಕೆಲವು ಅತ್ಯಧಿಕ ಸುಂಕಗಳನ್ನು ವಿಧಿಸುತ್ತದೆ ಎಂದು ಹೇಳಿದ್ದಾರೆ.

ಕನ್ಸರ್ವೇಟಿವ್ ಪೊಲಿಟಿಕಲ್ ಆಕ್ಷನ್ ಕಾನ್ಫರೆನ್ಸ್(CPAC) ನಲ್ಲಿ ಮಾತನಾಡಿದ ಟ್ರಂಪ್, ಪೇಪರ್ ಬ್ಯಾಲೆಟ್ಳಿಗೆ ಹಿಂತಿರುಗಲು ಸಲಹೆ ನೀಡಿದರು ಮತ್ತು ಚುನಾವಣಾ ಪ್ರಕ್ರಿಯೆಗಳಿಗೆ ಭಾರತದ ಸಹಾಯವನ್ನು ಕೋರುವ ಬಗ್ಗೆ ಪ್ರಸ್ತಾಪಿಸಿದರು. ನಾವು ಹಳೆಯ ಕಾಗದದ ಮತಪತ್ರಗಳಿಗೆ ಏಕೆ ಮರಳಬಾರದು? ನಾವು ಚುನಾವಣೆಗಾಗಿ ಭಾರತಕ್ಕೆ ಹಣ ನೀಡುತ್ತಿದ್ದೇವೆ. ಅವರಿಗೆ ಹಣದ ಅಗತ್ಯವಿಲ್ಲ. ಭಾರತ ವಿಶ್ವದ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಅವರು 200ರಷ್ಟು ಸುಂಕವನ್ನು ವಿಧಿಸುತ್ತಾರೆ ಎಂದು ಹೇಳಿದರು.

21 ಮಿಲಿಯನ್ ಡಾಲರ್ ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕಾಗಿ ನನ್ನ ಫ್ರೆಂಡ್ ಮೋದಿಗೆ ಹೋಗಿದೆ. ನಾವು ಭಾರತದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ 21 ಮಿಲಿಯನ್ ಡಾಲರ್ ಕೊಟ್ಟಿದ್ದೇವೆ, ನಮ್ಮ ಕಥೆಯೇನು? ನಮ್ಮ ಮತದಾನ ಪ್ರಮಾಣವೂ ಹೆಚ್ಚಾಗಬೇಕು ಎಂದು ಹೇಳಿದ್ದಾರೆ.

ಫೆಬ್ರವರಿ 16ರಂದು, ಎಲೋನ್ ಮಸ್ಕ್ ನೇತೃತ್ವದ DOGE “ಭಾರತದಲ್ಲಿ ಮತದಾರರ ಮತದಾನ”ಕ್ಕಾಗಿ ಉದ್ದೇಶಿಸಲಾದ 21 ಮಿಲಿಯನ್ ಡಾಲರ್ ನಿಧಿಯನ್ನು ರದ್ದುಗೊಳಿಸುವುದಾಗಿ ಘೋಷಿಸಿತು. ಅಮೆರಿಕದ ಸರಕಾರಿ ದಕ್ಷತೆ ಇಲಾಖೆ (DOGE) ನಿರ್ಧಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಮೊದಲು ಸಮರ್ಥಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News