ಟರ್ಕಿ: ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಮೂವರು ಪ್ರಮುಖ ಪತ್ರಕರ್ತರ ಬಂಧನ

Update: 2023-11-03 17:52 GMT
ಅಂಕಾರ: ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಟರ್ಕಿಯಲ್ಲಿ ಮೂವರು ಪ್ರಮುಖ ಪತ್ರಕರ್ತರನ್ನು ಬಂಧಿಸಿರುವುದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಸರಕಾರದ ದಬ್ಬಾಳಿಕೆ ಹೆಚ್ಚುತ್ತಿರುವುದನ್ನು ಸೂಚಿಸಿದೆ ಎಂಬ ಕಳವಳ ವ್ಯಕ್ತವಾಗಿದೆ.
`ಸುಳ್ಳು ಮಾಹಿತಿಗೆ ಸಂಬಂಧಿಸಿದ ಕಾನೂನಿ'ನಡಿ ಪತ್ರಕರ್ತರಾದ  ಟೋಲ್ಗಾ ಸರ್ದಾನ್ ಮತ್ತು ಡಿನ್ಸೆರ್ ಗೋಕ್ಸ್‍ರನ್ನು ಪ್ರತ್ಯೇಕವಾಗಿ ಬಂಧಿಸಿ ಬುಧವಾರ ಪ್ರಕರಣ ದಾಖಲಿಸಲಾಗಿದೆ. ಆರೋಪ ಸಾಬೀತಾದರೆ ಮೂರು ವರ್ಷದವರೆಗೆ ಜೈಲುಶಿಕ್ಷೆಗೆ ಅವಕಾಶವಿದೆ. `ಹಾಕ್ ಟಿವಿ'ಯ ವರದಿಗಾರ ಸೆಂಗಿಝ್ ಎರ್ಡಿಂಕ್‍ರನ್ನು ಸುಳ್ಳು ಮಾಹಿತಿ ಪ್ರಸಾರ ಮಾಡಿದ ಆರೋಪದಡಿ ಗುರುವಾರ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. 
ಟರ್ಕಿ ಸರಕಾರ ಮುಕ್ತ ಮಾಧ್ಯಮ ವ್ಯವಸ್ಥೆಯ ಬಗ್ಗೆ ಹಗೆತನದ ಧೋರಣೆ ಹೊಂದಿದ್ದು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.
Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News