ಯುಎಇ | ಇಸ್ರೇಲ್‍ ನ ಧಾರ್ಮಿಕ ಶಿಕ್ಷಕನ ಮೃತದೇಹ ಪತ್ತೆ

Update: 2024-11-24 15:52 GMT

ಸಾಂದರ್ಭಿಕ ಚಿತ್ರ

ಜೆರುಸಲೇಂ : ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ನಾಪತ್ತೆಯಾಗಿದ್ದ ಇಸ್ರೇಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ರವಿವಾರ ಹೇಳಿದ್ದು ಅವರ ಸಾವನ್ನು `ಘೋರ, ಯೆಹೂದ್ಯ ವಿರೋಧಿ ಕೃತ್ಯ' ಎಂದು ಖಂಡಿಸಿದೆ.

ಯುಎಇಯಲ್ಲಿ ಚಾಬಾದ್ ಎಂಬ ಸಾಂಪ್ರದಾಯಿಕ ಯಹೂದಿ ಗುಂಪಿನಲ್ಲಿ ಕೆಲಸ ಮಾಡುತ್ತಿದ್ದ ಧಾರ್ಮಿಕ ಶಿಕ್ಷ ಝ್ವಿ ಕೊಗೆನ್ ಗುರುವಾರದಿಂದ ನಾಪತ್ತೆಯಾಗಿದ್ದರು. ಈ ಹತ್ಯೆಗೆ ಹೊಣೆಯಾದವರನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಸ್ರೇಲ್ ಪ್ರಧಾನಿಯ ಕಚೇರಿ ಹೇಳಿಕೆ ನೀಡಿದೆ.

ಜಗತ್ತಿನಾದ್ಯಂತದ ಜಾತ್ಯಾತೀತ ಯೆಹೂದಿಗಳು ಅಥವಾ ಯೆಹೂದಿ ಸಮುದಾಯದ ನಡುವೆ ಸಂಪರ್ಕದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಚಾಬಾದ್ ಗುಂಪು ಯುಎಇಯಲ್ಲಿ ಹೊಂದಿರುವ ಶಾಖೆಯು ಆ ದೇಶಕ್ಕೆ ಭೇಟಿ ನೀಡುವ ಸಾವಿರಾರು ಯೆಹೂದಿಗಳಿಗೆ ಅಗತ್ಯದ ಸಹಾಯ ಒದಗಿಸುತ್ತಿದೆ. ಯುಎಇಗೆ ಅತೀ ಅಗತ್ಯವಿದ್ದರೆ ಮಾತ್ರ ಪ್ರಯಾಣಿಸುವಂತೆ ಇಸ್ರೇಲ್ ತನ್ನ ನಾಗರಿಕರಿಗೆ ಸಲಹೆ ನೀಡಿದ್ದು ಪ್ರಸ್ತುತ ಯುಎಇಯಲ್ಲಿ ಇರುವ ಇಸ್ರೇಲಿಯನ್ನರು ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News