ಗಾಝಾಕ್ಕೆ 288 ಟನ್ ನೆರವು ಒದಗಿಸಿದ ಯುಎಇ

Update: 2024-11-08 16:12 GMT

PC : ANI

ಗಾಝಾ : ಯುಎಇ ಒದಗಿಸಿರುವ 288 ಟನ್ ನೆರವು ಹೊತ್ತ 20 ಟ್ರಕ್‍ಗಳು ಶುಕ್ರವಾರ ಈಜಿಪ್ಟ್ ನ ರಫಾಹ್ ಗಡಿದಾಟು ಮೂಲಕ ಗಾಝಾ ಪಟ್ಟಿಯನ್ನು ಪ್ರವೇಶಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಗಾಝಾದಲ್ಲಿ ಇಸ್ರೇಲ್‍ನ ಯುದ್ಧದಿಂದ ಸುಮಾರು 1.9 ದಶಲಕ್ಷ ಫೆಲೆಸ್ತೀನೀಯರು ತೀವ್ರ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಯುದ್ಧದಿಂದ ಪರಿಣಾಮಕ್ಕೆ ಒಳಗಾಗಿರುವ ಫೆಲೆಸ್ತೀನೀಯರ ಸಂಕಷ್ಟವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಯುಎಇ ಇದುವರೆಗೆ ಆಹಾರ, ವೈದ್ಯಕೀಯ ಸರಬರಾಜು, ಮಕ್ಕಳ ಪೌಷ್ಟಿಕಾಂಶದ ಪೂರಕಗಳು, ಬಟ್ಟೆ, ಆಶ್ರಯ ಸಾಮಾಗ್ರಿಗಳು ಮತ್ತು ಮಹಿಳೆಯರಿಗೆ ಆರೋಗ್ಯ ಕಿಟ್ ಸೇರಿದಂತೆ 17,312 ಟನ್‍ಗಳಷ್ಟು ನೆರವನ್ನು ಗಾಝಾ ನಿವಾಸಿಗಳಿಗೆ ಒದಗಿಸಿದೆ. ಜತೆಗೆ ರಫಾದಲ್ಲಿ ಕ್ಷೇತ್ರ ಆಸ್ಪತ್ರೆಯನ್ನು ಮತ್ತು ಈಜಿಪ್ಟ್‍ನ ಅಲ್-ಅರಿಷ್ ನಗರದಲ್ಲಿ ತೇಲುವ ಆಸ್ಪತ್ರೆಯನ್ನು ತೆರೆದಿದೆ ಹಾಗೂ ಕೈಕಾಲುಗಳನ್ನು ಕಳೆದುಕೊಂಡವರಿಗೆ ಕೃತಕ ಅಂಗ ಜೋಡಣೆಯ ಯೋಜನೆಯನ್ನು ಆರಂಭಿಸಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News