ಮಂಗಳ ಗ್ರಹದಲ್ಲಿ ಅನ್ಯಜಗತ್ತಿನ ಅವಶೇಷ ಪತ್ತೆಹಚ್ಚಿದ ನಾಸಾದ ಬಾಹ್ಯಾಕಾಶ ನೌಕೆ

Update: 2023-12-20 17:24 GMT

Photo: twitter/NASA

ವಾಷಿಂಗ್ಟನ್: ಮಂಗಳ ಗ್ರಹದ ಮೇಲ್ಮೈಯಲ್ಲಿ ಅನ್ಯಜಗತ್ತಿನ ಅವಶೇಷಗಳನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ನಾಸಾ)ದ ಮಾರ್ಸ್ಕಾಪ್ಟರ್ ಪತ್ತೆಹಚ್ಚಿದೆ ಎಂದು ವರದಿಯಾಗಿದೆ.

ಮಾರ್ಸ್ ಕಾಪ್ಟರ್ (ಮಂಗಳ ಗ್ರಹದ ಮೇಲೆ ಸಂಚರಿಸುವ ಹೆಲಿಕಾಪ್ಟರ್) ಎಪ್ರಿಲ್‌ ನಲ್ಲಿ ಪತ್ತೆಹಚ್ಚಿರುವ ಅವಶೇಷಗಳ ಫೋಟೋಗಳನ್ನು ನಾಸಾ ಬಿಡುಗಡೆಗೊಳಿಸಿದೆ. ಈ ಚಿತ್ರಗಳು ಅನ್ಯಜಗತ್ತು ಎಂದು ವಿವರಿಸಲ್ಪಟ್ಟಿರುವ ವಿಷಯದತ್ತ ಒಂದು ನೋಟವನ್ನು ನೀಡುತ್ತದೆ, ಆದರೆ ವಾಸ್ತವವಾಗಿ ವಾಸ್ತವವಾಗಿ 2021ರಲ್ಲಿ ‘ಪರ್ಸೆವರೆನ್ಸ್ ರೋವರ್’(ನಾಸಾದ ಬಾಹ್ಯಾಕಾಶ ನೌಕೆ) ಮಂಗಳನ ಮೇಲ್ಮೈಯನ್ನು ಸ್ಪರ್ಷಿಸುವ ಸಂದರ್ಭದ ಲ್ಯಾಂಡಿಂಗ್ ಉಪಕರಣಗಳಿಗೆ ಸಂಬಂಧಿಸಿದೆ. ಈ ಚಿತ್ರಗಳಲ್ಲಿ ಮಂಗಳನ ವಾತಾವರಣವನ್ನು ಪ್ರವೇಶಿಸುವಾಗ ರೋವರ್ ಮತ್ತು ಹೆಲಿಕಾಪ್ಟರ್ ರಕ್ಷಣೆಗೆ ಬಳಸುವ ಸಾಧನ(ಬ್ಯಾಕ್ಶೆಲ್)ದ ಅವಶೇಷಗಳಾಗಿವೆ. ಇದರಲ್ಲಿ 70 ಅಡಿ ಉದ್ದದ ಪ್ಯಾರಾಷೂಟ್ ಕೂಡಾ ಸೇರಿದೆ ಎಂದು ನಾಸಾದ ಇಂಜಿನಿಯರ್ ಇಯಾನ್ ಕ್ಲರ್ಕ್ ಹೇಳಿದ್ದಾರೆ. ಈ ಚಿತ್ರಗಳು ಎರಡು ಉದ್ದೇಶಗಳನ್ನು ಪೂರೈಸುತ್ತವೆ. ವಿಸ್ಮಯಕಾರಿ ದೃಶ್ಯಗಳ ಜತೆಗೆ ಭವಿಷ್ಯದ ಮಂಗಳ ಕಾರ್ಯಾಚರಣೆಯಲ್ಲಿ ಕೆಲಸ ಮಾಡುವ ಇಂಜಿನಿಯರ್ಗಳಿಗೆ ಮಾಹಿತಿ ಕೋಶಗಳಂತೆಯೂ ಕಾರ್ಯನಿರ್ವಹಿಸುತ್ತವೆ ಎಂದವರು ಹೇಳಿದ್ದಾರೆ.

ಪರ್ಸೆವರೆನ್ಸ್ ನೌಕೆ ಮಂಗಳನ ಮೇಲ್ಮೈಯಲ್ಲಿ ಇಳಿಯುವ ಸಂದರ್ಭ ರೂಪುಗೊಂಡ ಕುಳಿಯಲ್ಲಿನ ಸಿಯೆತಾಹ್ ಮತ್ತು ಮಾಝ್ ಶಿಲಾರಚನೆಯ ನಡುವೆ ಇರುವ ಅವಶೇಷಗಳ ಆಯಕಟ್ಟಿನ ಸ್ಥಳವು ಆವಿಷ್ಕಾರಕ್ಕೆ ಮತ್ತೊಂದು ಆಯಾಮವನ್ನು ಸೇರಿಸಿದೆ ಎಂದು ನಾಸಾ ವಿಜ್ಞಾನಿ ಕೆನ್ನೆತ್ ಫಾರ್ಲೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News