ಉಕ್ರೇನ್ | ರಶ್ಯದ ದಾಳಿಯಲ್ಲಿ ಇಬ್ಬರು ಮೃತ್ಯು ; ವ್ಯಾಪಕ ಹಾನಿ
ಕೀವ್ : ಉಕ್ರೇನ್ನದ ಖಾರ್ಕಿವ್ ಪ್ರಾಂತದ ಮೇಲೆ ಶುಕ್ರವಾರ ರಾತ್ರಿ ರಶ್ಯ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು ಮೂವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ದೇಶದಾದ್ಯಂತ ಇಂಧನ ಸೌಲಭ್ಯಗಳು ಮತ್ತು ರೈಲ್ವೇ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ. ಈಶಾನ್ಯದಲ್ಲಿರುವ ಬಾರ್ವಿಂಕೋವ್ ಎಂಬ ಸಣ್ಣ ಪಟ್ಟಣದಲ್ಲಿನ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಇಸ್ಕಾಂಡರ್ ಕ್ಷಿಪಣಿಯನ್ನು ರಶ್ಯದ ಸೇನೆ ಪ್ರಯೋಗಿಸಿದ್ದು ಇಬ್ಬರು ಮೃತಪಟ್ಟು ಇತರ ಮೂವರು ಗಾಯಗೊಂಡಿದ್ದಾರೆ ಎಂದು ಖಾರ್ಕಿವ್ನೋ ಪ್ರಾಂತೀಯ ಗವರ್ನರ್ ಒಲೆಹ್ ಸಿನೆಹುಬೊವ್ ಹೇಳಿದ್ದಾರೆ. 50ಕ್ಕೂ ಅಧಿಕ ಮನೆಗಳು, ವಾಣಿಜ್ಯ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ರಶ್ಯ ಸೇನೆ ಪ್ರಯೋಗಿಸಿದ 17 ಡ್ರೋನ್ಗಯಳಲ್ಲಿ 13ನ್ನು ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ. ಉತ್ತರ ಚೆರ್ನಿಹಿವ್ ಪ್ರಾಂತ ಮತ್ತು ಈಶಾನ್ಯದ ಸುಮಿ ಪ್ರಾಂತ, ಮಧ್ಯ ಉಕ್ರೇನ್ನಳ ಪೊಲ್ಟಾವ ಪ್ರಾಂತದ ವಿದ್ಯುತ್ ವಿತರಣಾ ವ್ಯವಸ್ಥೆಯ ಮೇಲೆ ಡ್ರೋನ್ ದಾಳಿ ನಡೆದಿದ್ದು ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಹಲವು ಕೈಗಾರಿಕಾ ಪ್ರದೇಶ ಮತ್ತು ನಗರಗಳಲ್ಲಿ ವಿದ್ಯುತ್ ಕಡಿತ ಜಾರಿಗೊಳಿಸಲಾಗಿದೆ. ಖಾರ್ಕಿವ್ ಪ್ರಾಂತದ ಹಲವೆಡೆ ರೈಲ್ವೇ ಹಳಿಗಳಿಗೆ ಹಾನಿಯಾಗಿದ್ದು ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.