ಉಕ್ರೇನ್ ಯುದ್ಧದ ವಾರ್ಷಿಕ ದಿನ |ರಶ್ಯ ರಾಯಭಾರಿಯ ಮನೆಯೆದುರು ಸಗಣಿ ರಾಶಿ
Update: 2024-02-24 17:53 GMT
ವಾರ್ಸಾ: ಉಕ್ರೇನ್ ಮೇಲೆ ರಶ್ಯದ ಪೂರ್ಣಪ್ರಮಾಣದ ಆಕ್ರಮಣದ 2ನೇ ವಾರ್ಷಿಕ ದಿನದ ಸಂದರ್ಭ ಶನಿವಾರ ಪೋಲ್ಯಾಂಡ್‍ನ ರಾಜಧಾನಿ ವಾರ್ಸಾದಲ್ಲಿನ ರಶ್ಯ ರಾಯಭಾರಿಯ ಮನೆಯ ಹೊರಗೆ 2 ಟನ್‍ಗಳಷ್ಟು ಸಗಣಿಯನ್ನು ರಾಶಿ ಹಾಕಿ ಪ್ರತಿಭಟನೆ ನಡೆಸಲಾಗಿದೆ.
ರಶ್ಯ ರಾಯಭಾರಿಯ ಮನೆಯ ಹೊರಗೆ ಪೇರಿಸಿಟ್ಟ ಸಗಣಿ ರಾಶಿಯ ಮೇಲೆ ರಕ್ತದ ಕಲೆಯಿರುವ ರಶ್ಯದ ಧ್ವಜವನ್ನು ನೆಟ್ಟ ಪ್ರತಿಭಟನಾಕಾರರು ಅದರ ಪಕ್ಕದಲ್ಲಿ `ಇಯು(ಯುರೋಪಿಯನ್ ಯೂನಿಯನ್)ನಲ್ಲಿ ನೀವು ಇರುವುದು ನಮಗೆ ಇಷ್ಟವಿಲ್ಲ. ತಕ್ಷಣ ತೊಲಗಿ' ಎಂಬ ಬರಹವಿದ್ದ ಬ್ಯಾನರ್ ಪ್ರದರ್ಶಿಸಿದರು.
ವಾರ್ಸಾದ ಹಲವೆಡೆ ಉಕ್ರೇನ್ ಯುದ್ಧ ವಿರೋಧಿಸಿ ಪ್ರತಿಭಟನೆ ನಡೆದಿದೆ. ಸೈರನ್‍ಗಳನ್ನು ಮೊಳಗಿಸಿ, ಗುಂಡಿನ ಸದ್ದು, ಬಾಂಬ್ ಸ್ಫೋಟದ ಶಬ್ದವನ್ನು ಪ್ರಸಾರ ಮಾಡಿದರು. `ರಶ್ಯದ ರಾಯಭಾರಿಯನ್ನು ನಮ್ಮ ದೇಶದಿಂದ ಉಚ್ಛಾಟಿಸಲು ಇದು ಸರಿಯಾದ ಸಮಯʼ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.