ಅಮೆರಿಕ | ತನ್ನ ಕೈಯಲ್ಲಿದ್ದ ಬಂದೂಕಿನಿಂದಲೇ ಗುಂಡು ಸಿಡಿದು ಭಾರತೀಯ ವಿದ್ಯಾರ್ಥಿ ಮೃತ್ಯು

Update: 2024-11-22 17:14 GMT

ಅಟ್ಲಾಂಟಾ : ಅಮೆರಿಕದ ಅಟ್ಲಾಂಟ ನಗರದಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನ ಕೈಯ್ಯಲ್ಲಿದ್ದ ರೈಫಲ್ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಆತ ಸಾವನ್ನಪ್ಪಿದ್ದಾನೆ.

ನವೆಂಬರ್ 13ರಂದು ಈ ಘಟನೆ ನಡೆದಿದ್ದು, ಗುರುವಾರವಷ್ಟೇ ಮಾಧ್ಯಮಗಳಲ್ಲಿ ವರದಿಯಾಗಿದೆ. ಕಾನ್ಸಾಸ್ ರಾಜ್ಯ ವಿವಿಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾದ ಆರ್ಯನ್ ರೆಡ್ಡಿ ಇತ್ತೀಚೆಗಷ್ಟೇ ಹಂಟಿಂಗ್ ರೈಫಲ್ ಅನ್ನು ಖರೀದಿಸಿದ್ದನು.

ಅದನ್ನು ಸ್ವಚ್ಛಗೊಳಿಸುತ್ತಿದ್ದಾಗ ಗುಂಡು ಸಿಡಿದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗುಂಡಿನ ಸದ್ದುಕೇಳಿ ಕೊಠಡಿಗೆ ಆಗಮಿಸಿದ ಸ್ನೇಹಿತರಿಗೆ ಆರ್ಯನ್ ರೆಡ್ಡಿ ರಕ್ತದ ಮಡುವಿನ ಬಿದ್ದಿರುವುದನ್ನು ಕಂಡಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರಾದರೂ, ಆತ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.

ರೆಡ್ಡಿ ಅವರಿಗೆ ಇತ್ತೀಚೆಗಷ್ಟೇ ಅಮೆರಿಕದ ಬಂದೂಕು ಪರವಾನಿಗೆ ದೊರೆತಿತ್ತು.ರೆಡ್ಡಿ ಅವರ ಕುಟುಂಬಿಕರು ತೆಲಂಗಾಣದ ಭುವನಗಿರಿಯ ಜಿಲ್ಲೆಯವರಾಗಿದ್ದು, ಪ್ರಸಕ್ತ ಅವರು ಉಪ್ಪಲ ಜಿಲ್ಲೆಯಲ್ಲಿ ವಾಸವಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News