ಲಂಚದ ಆರೋಪ: ಗೌತಮ್ ಅದಾನಿ, ಸೋದರಳಿಯ ಸಾಗರ್ ಗೆ ಸಮನ್ಸ್ ಜಾರಿ

Update: 2024-11-23 11:28 GMT

ಗೌತಮ್ ಅದಾನಿ ,  ಅವರ ಸೋದರಳಿಯ ಸಾಗರ್  | PC : Adani Group

ಅಮೆರಿಕ: ಸೌರ ವಿದ್ಯುತ್ ಒಪ್ಪಂದಕ್ಕೆ ಸಂಬಂಧಿಸಿ ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ಮಾಡಿರುವ 2,200 ಕೋಟಿ ರೂ. ಲಂಚ ಮತ್ತು ವಂಚನೆ ಆರೋಪಕ್ಕೆ ಸಂಬಂಧಿಸಿ ವಿವರಣೆ ಕೋರಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅವರಿಗೆ ಸಮನ್ಸ್ ನೀಡಲಾಗಿದೆ.

ಅಹ್ಮದಾಬಾದ್ ನಲ್ಲಿರುವ ಅದಾನಿ ಅವರ ಶಾಂತಿವನ ನಿವಾಸಕ್ಕೆ ಮತ್ತು ಅದೇ ನಗರದಲ್ಲಿನ ಅವರ ಸೋದರಳಿಯ ಸಾಗರ್ ಅವರ ನಿವಾಸಕ್ಕೆ ಸಮನ್ಸ್ ಕಳುಹಿಸಲಾಗಿದೆ. ಈ ಸಮನ್ಸ್ ನೀಡಿದ 21 ದಿನಗಳಲ್ಲಿ ನೀವು ಕಡ್ಡಾಯವಾಗಿ ಉತ್ತರವನ್ನು ಸಲ್ಲಿಸಬೇಕು ಎಂದು ನ್ಯೂಯಾರ್ಕ್ ಪೂರ್ವ ಜಿಲ್ಲಾ ನ್ಯಾಯಾಲಯ ನೋಟಿಸ್ ನಲ್ಲಿ ತಿಳಿಸಿದೆ.

ಗೌತಮ್ ಅದಾನಿ ಮತ್ತು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ನಲ್ಲಿ ನಿರ್ದೇಶಕರಾಗಿರುವ ಅವರ ಸೋದರಳಿಯ ಸಾಗರ್ ಸೇರಿದಂತೆ ಇತರ 7 ಆರೋಪಿಗಳು 2020 ಮತ್ತು 2024ರ ನಡುವೆ ಸೌರ ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಸುಮಾರು 265 ಮಿಲಿಯನ್ ಡಾಲರ್ ಲಂಚ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರ ಬೆನ್ನಲ್ಲೇ ಅದಾನಿ ವಿರುದ್ಧ ನ್ಯೂಯಾರ್ಕ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News