ಅಮೆರಿಕ: ಸಂಸತ್ ಸ್ಪೀಕರ್ ಆಯ್ಕೆ ಪ್ರಕ್ರಿಯೆಗೆ ಹಿನ್ನಡೆ

Update: 2023-10-13 17:34 GMT

Photo: facebook.com/RepSteveScalise

ವಾಷಿಂಗ್ಟನ್: ಅಮೆರಿಕ ಸಂಸತ್ನ ಕೆಳಮನೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನ ಸ್ವೀಕರ್ ಆಯ್ಕೆ ಮಾಡುವ ರಿಪಬ್ಲಿಕನ್ ಪಕ್ಷದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಪದಚ್ಯುತ ಸ್ಪೀಕರ್ ಕೆವಿನ್ ಮೆಕಾರ್ಥಿ ಸ್ಥಾನದಲ್ಲಿ ಸ್ಪೀಕರ್ ಹುದ್ದೆ ನಿರ್ವಹಿಸುವ ರಿಪಬ್ಲಿಕನ್ ಅಭ್ಯರ್ಥಿಯನ್ನು ಆಯ್ಕೆಯನ್ನು ಮಾಡಲು ನಡೆದ ರಸಹ್ಯ ಮತದಾನದಲ್ಲಿ ಹುದ್ದೆಯ ಆಕಾಂಕ್ಷಿ US House paralysed as Scalise scrambles for votes

 ಗೆಲುವಿಗೆ ಅಗತ್ಯದ 217 ಮತಗಳನ್ನು ಪಡೆಯಲು ವಿಫಲರಾಗುವುದರೊಂದಿಗೆ ಸ್ಪರ್ಧೆಯಿಂದ ಹೊರಬಿದ್ದರು.

435 ಸದಸ್ಯಬಲದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ರಿಪಬ್ಲಿಕನ್ ಪಕ್ಷ 221 ಸ್ಥಾನಗೆದ್ದು ಬಹುಮತ ಹೊಂದಿದೆ. ಆಡಳಿತಾರೂಢ ಡೆಮೊಕ್ರಟಿಕ್ ಪಕ್ಷ 212 ಸ್ಥಾನ ಗೆದ್ದಿದ್ದರೆ 2 ಸ್ಥಾನ ಕಾಲಿಯಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಸ್ಟೀವ್ ಸ್ಕಾಲಿಸ್ ಗೆ ಸ್ವಪಕ್ಷೀಯರಿಂದಲೇ ವಿರೋಧ ಎದುರಾಗಿದೆ. ಮತ್ತೊಂದು ಸುತ್ತಿನ ಮತದಾನದಲ್ಲಿ ತಾನು ಭಾಗವಹಿಸುವುದಿಲ್ಲ ಮತ್ತು ಸ್ಪೀಕರ್ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಕಾಲಿಸ್ ಪ್ರತಿಕ್ರಿಯಿಸಿದ್ದಾರೆ.

ಇದರೊಂದಿಗೆ ನಾಯಕರಿಲ್ಲದ ಸದನದಲ್ಲಿ ಯಾವುದೇ ಪ್ರಮುಖ ಮಸೂದೆಗಳಿಗೆ ಅನುಮೋದನೆ ಪಡೆಯುವುದು ಅಸಾಧ್ಯವಾಗಿದೆ. ಪಕ್ಷದ ಸರ್ವಾನುಮತದ ಅಭ್ಯರ್ಥಿಯನ್ನು ಶೀಘ್ರವೇ ಹೆಸರಿಸಲಾಗುವುದು ಎಂದು ರಿಪಬ್ಲಿಕನ್ ಪಕ್ಷದ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News