ಇರಾನ್ ತೈಲ ಸಾಗಿಸಿದ ಭಾರತದ ಹಡಗು ಸೇವಾ ಸಂಸ್ಥೆಗೆ ನಿರ್ಬಂಧ : ಅಮೆರಿಕ ಘೋಷಣೆ

Update: 2024-10-12 16:18 GMT

PC : istockphoto

ವಾಷಿಂಗ್ಟನ್ : ಇರಾನ್ ವಿರುದ್ಧ ವಿಧಿಸಿರುವ ನಿರ್ಬಂಧಗಳನ್ನು ಧಿಕ್ಕರಿಸಿ ಆ ದೇಶದಿಂದ ಪೆಟ್ರೋಲಿಯಂ ಸಾಗಣೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪದಡಿ ಭಾರತದ ಹಡಗು ಸೇವಾ ಕಂಪೆನಿಯ ಮೇಲೆ ನಿರ್ಬಂಧ ವಿಧಿಸಿರುವುದಾಗಿ ಅಮೆರಿಕ ಘೋಷಿಸಿದೆ.

ಮುಂಬೈಯಲ್ಲಿ ನೋಂದಣಿಗೊಂಡಿರುವ ಗಬ್ಬಾರೊ ಹಡಗು ಸೇವಾ ಸಂಸ್ಥೆಯು ಕಚ್ಛಾ ತೈಲ ಸಾಗಿಸುವ ಟ್ಯಾಂಕರ್ `ಹಾರ್ನೆಟ್'ನ ತಾಂತ್ರಿಕ ವ್ಯವಸ್ಥಾಪಕರಾಗಿ ಇರಾನ್‍ನಿಂದ ಪೆಟ್ರೋಲಿಯಂ ಸಾಗಣೆಯ ವಹಿವಾಟಿನಲ್ಲಿ ತೊಡಗಿದೆ. ಹಡಗಿನಲ್ಲಿ ಗಬ್ಬಾರೊ ಸಂಸ್ಥೆಯೂ ಪಾಲು ಹೊಂದಿದೆ' ಎಂದು ಅಮೆರಿಕದ ವಿದೇಶಾಂಗ ಇಲಾಖೆ ಘೋಷಿಸಿದೆ.

ನಿರ್ಬಂಧದಡಿ, ಸಂಸ್ಥೆಯು ಅಮೆರಿಕದಲ್ಲಿ ಹೊಂದಿರುವ ಆಸ್ತಿ ಮತ್ತು ಅದರಿಂದ ಬರುವ ಬಡ್ಡಿಗಳನ್ನು ಸ್ಥಂಭನಗೊಳಿಸಲಾಗುವುದು. ಸಂಸ್ಥೆಯಲ್ಲಿ 50%ಕ್ಕೂ ಅಧಿಕ ಪಾಲನ್ನು ಹೊಂದಿರುವ ವ್ಯಕ್ತಿ ಅಥವಾ ಸಂಸ್ಥೆಗಳಿಗೂ ನಿರ್ಬಂಧ ಅನ್ವಯಿಸುತ್ತದೆ. ಹಾರ್ನೆಟ್ ಟ್ಯಾಂಕರ್ ಗಲ್ಫ್ ಮತ್ತು ಚೀನಾದ ನಡುವಿನ ಮಾರ್ಗದಲ್ಲಿ ಚಲಿಸುತ್ತಿರುವ ಮಾಹಿತಿಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News