ಅಪರೂಪದ ಮಳೆ |ಸಹಾರ ಮರುಭೂಮಿಯಲ್ಲಿ ಪ್ರವಾಹ

Update: 2024-10-12 16:08 GMT

PC : AP

ಅಲ್ಜೀರ್ಸ್ : ಪ್ರಪಂಚದ ಅತ್ಯಂತ ಬರಡು ಮತ್ತು ಶುಷ್ಕ ಪ್ರದೇಶಗಳಲ್ಲಿ ಒಂದಾದ ಆಫ್ರಿಕಾದ ಸಹಾರ ಮರುಭೂಮಿಯಲ್ಲಿ ಅಪರೂಪದ ಮಳೆ ಸುರಿದು ಹಲವೆಡೆ ಪ್ರವಾಹದ ಸ್ಥಿತಿ ಉಂಟಾಗಿದೆ.

ಧಾರಾಕಾರ ಸುರಿದ ಅಪರೂಪದ ಮಳೆಯಿಂದಾಗಿ ಅರ್ಧ ಶತಮಾನದಿಂದ ಬತ್ತಿಹೋಗಿದ್ದ ಇರಿಕಿ ಸರೋವರ ಕಳೆದ 50 ವರ್ಷಗಳಲ್ಲೇ ಮೊದಲ ಬಾರಿಗೆ ತುಂಬಿರುವ ಚಿತ್ರವನ್ನು ಉಪಗ್ರಹಗಳು ರವಾನಿಸಿವೆ. ಅನಿರೀಕ್ಷಿತ ಮಳೆಯಿಂದಾಗಿ ಪ್ರವಾಹದ ನೀರು ಸಹಾರ ಮರುಭೂಮಿಯ ಮರಳಿನ ಮೂಲಕ ಸಾಗುತ್ತಿರುವ ಫೋಟೋವನ್ನು ಮಾಧ್ಯಮಗಳು ಪ್ರಸಾರ ಮಾಡಿವೆ.

ಸಾಮಾನ್ಯವಾಗಿ ಬೇಸಿಗೆಯ ಅಂತ್ಯದಲ್ಲಿ ಮಳೆಯಾಗದ ಆಗ್ನೇಯ ಮೊರೊಕ್ಕೋದಲ್ಲಿ ಸೆಪ್ಟಂಬರ್ ನಲ್ಲಿ 2 ದಿನ ಉತ್ತಮ ಮಳೆಯಾಗಿದೆ. ಬರದ ಹೊಡೆತಕ್ಕೆ ಸಿಲುಕಿರುವ ಟಾಟ ಪ್ರಾಂತದಲ್ಲಿ 24 ಗಂಟೆಯ ಅವಧಿಯಲ್ಲಿ 100 ಮಿ.ಮೀ.ಗೂ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿದ್ದು ಇದು ಕಳೆದ 50 ವರ್ಷಗಳಲ್ಲೇ ದಾಖಲೆಯಾಗಿದೆ ಎಂದು ಮೊರೊಕ್ಕೋದ ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News