ಟ್ರಂಪ್ ಆಯ್ಕೆಯಾಗದಿದ್ದರೆ ಶಿಕ್ಷೆಗೆ ಗುರಿಯಾಗುತ್ತಿದ್ದರು: ವಿಶೇಷ ವಕೀಲರ ವರದಿ
Update: 2025-01-14 16:08 GMT
ವಾಷಿಂಗ್ಟನ್ : ಕಳೆದ ನವೆಂಬರ್‍ನಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಆಯ್ಕೆಗೊಳ್ಳದಿದ್ದರೆ 2020ರ ಚುನಾವಣೆಯ ಫಲಿತಾಂಶವನ್ನು ರದ್ದುಗೊಳಿಸಲು ಪ್ರಯತ್ನಿಸಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗುತ್ತಿದ್ದರು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಮಂಗಳವಾರ ಬಿಡುಗಡೆಗೊಳಿಸಿದ ವಿಶೇಷ ನ್ಯಾಯವಾದಿ ಜ್ಯಾಕ್ ಸ್ಮಿತ್ ಅವರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಲಿ ಚುನಾಯಿತ ಅಧ್ಯಕ್ಷ, ರಿಪಬ್ಲಿಕನ್ ನಾಯಕ ಟ್ರಂಪ್ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಧ್ಯಕ್ಷ ಜೋ ಬೈಡನ್ ಅವರೆದುರು ಸೋತ ಬಳಿಕ ಫಲಿತಾಂಶದ ಪ್ರಮಾಣೀಕರಣವನ್ನು ತಡೆಯಲು ಸಂಚು ಹೂಡಿದ್ದಾರೆ ಎಂದು ಆರೋಪಿಸಿ, ಟ್ರಂಪ್ ವಿರುದ್ಧ ನಾಲ್ಕು ಕೌಂಟ್‍ಗಳ ದೋಷಾರೋಪಣೆಯನ್ನು ಹೊರಿಸಲು ಸ್ಮಿತ್ ನಿರ್ಧರಿಸಿದ್ದರು ಎಂದು ವರದಿ ಹೇಳಿದೆ.