ಉಝ್ಬೇಕಿಸ್ತಾನ | ಭಾರತೀಯ ಪ್ರಜೆಗೆ 20 ವರ್ಷ ಜೈಲುಶಿಕ್ಷೆ

Update: 2024-02-26 17:03 GMT

ಸಾಂದರ್ಭಿಕ ಚಿತ್ರ

ತಾಷ್ಕೆಂಟ್ : ಕಲುಷಿತ ಕೆಮ್ಮಿನ ಸಿರಪ್ ಸೇವಿಸಿ 68ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿರುವ ಪ್ರಕರಣದಲ್ಲಿ ಉಝ್ಬೇಕಿಸ್ತಾನದ ನ್ಯಾಯಾಲಯವು ಭಾರತೀಯ ಪ್ರಜೆಗೆ 20 ವರ್ಷ ಜೈಲುಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಉತ್ತರ ಪ್ರದೇಶ ಮೂಲದ ಔಷಧ ಉತ್ಪಾದಕ ಸಂಸ್ಥೆ `ಮರಿಯೊನ್ ಬಯೊಟೆಕ್ಸ್' ಸಂಸ್ಥೆ ಉಝ್ಬೇಕಿಸ್ತಾನದಲ್ಲಿ ಉತ್ಪಾದಿಸಿದ  ಕೆಮ್ಮಿನ ಸಿರಪ್‍ನ ವಿತರಕ ಸಂಸ್ಥೆ `ಕ್ಯುರಮಾಕ್ಸ್ ಮೆಡಿಕಲ್'ನ ಕಾರ್ಯನಿರ್ವಾಹಕ ನಿರ್ದೇಶಕ ರಾಘವೇಂದ್ರ ಪ್ರತಾರ್ ಸೇರಿದಂತೆ 23 ಮಂದಿಗೆ ತಲಾ 20 ವರ್ಷದ ಜೈಲುಶಿಕ್ಷೆ ವಿಧಿಸಿರುವುದಾಗಿ ಉಝ್ಬೇಕಿಸ್ತಾನದ ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News