ಬ್ರಿಟನ್‌ನ ನೂತನ ಪ್ರಧಾನಿಯಾಗಲಿರುವ ಕೀರ್‌ ಸ್ಟಾರ್ಮರ್‌ ಯಾರು?

Update: 2024-07-05 07:16 GMT

ಕೀರ್‌ ಸ್ಟಾರ್ಮರ್‌ (Photo: PTI)

ಲಂಡನ್: ಬ್ರಿಟನ್‌ ಚುನಾವಣೆಯಲ್ಲಿ ಅಲ್ಲಿನ ಲೇಬರ್‌ ಪಾರ್ಟಿ ಅಭೂತಪೂರ್ವ ಮುನ್ನಡೆ ಸಾಧಿಸಿರುವುದರಿಂದ ದೇಶದ ಮುಂದಿನ ಪ್ರಧಾನಿಯಾಗಿ ಪಕ್ಷದ ಪ್ರಮುಖ ನಾಯಕ ಕೀರ್‌ ಸ್ಟಾರ್ಮರ್‌ ಅಧಿಕಾರಕ್ಕೇರುವ ಸಾಧ್ಯತೆ ನಿಚ್ಚಳವಾಗಿದೆ. ಮಾನವ ಹಕ್ಕುಗಳ ಮಾಜಿ ವಕೀಲರು ಹಾಗೂ ಸಾರ್ವಜನಿಕ ಅಭಿಯೋಜಕರಾಗಿರುವ ಸ್ಟಾರ್ಮರ್‌ (61) ಕಳೆದ ಅರ್ಧ ಶತಮಾನದಲ್ಲಿಯೇ ದೇಶದ ಪ್ರಧಾನಿ ಹುದ್ದೆಗೇರಿದ ಅತ್ಯಂತ ಹಿರಿಯ ಮುಖಂಡರಾಗಲಿದ್ದಾರೆ.

ಇಂಗ್ಲೆಂಡ್‌ ಪಬ್ಲಿಕ್‌ ಪ್ರಾಸಿಕ್ಯೂಶನ್ಸ್‌ ನಿರ್ದೇಶಕರಾಗಿ ಅವರು ಲೇಬರ್‌ ಪಕ್ಷದ ಗೋರ್ಡನ್‌ ಬ್ರೌನ್‌ ಪ್ರಧಾನಿಯಾಗಿದ್ದ ವೇಳೆ ಸೇವೆ ಸಲ್ಲಿಸಿದ್ದರು.

ರಾಣಿ ಎಲಿಜಬೆತ್‌ II ಅವರಿಗೆ ನೈಟ್‌ ಗೌರವ ನೀಡಿದ್ದರೂ ಅವರು ತಮ್ಮ ಹೆಸರಿನ ಮುಂದೆ ಸರ್‌ ಬಳಸಲು ಇಚ್ಛಿಸಿಲ್ಲ. 2015ರಲ್ಲಿ ಸಂಸದರಾಗಿ ಉತ್ತರ ಲಂಡನ್‌ನಿಂದ ಅವರು ಆಯ್ಕೆಯಾಗಿದ್ದರು.

2020ರಲ್ಲಿ ಅವರು ಲೇಬರ್‌ ಪಾರ್ಟಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಸೆಪ್ಟೆಂಬರ್‌ 2, 1962ರಲ್ಲಿ ಜನಿಸಿದ ಸ್ಟಾರ್ಮರ್‌ ಅವರ ಪೂರ್ಣ ಹೆಸರು ಕೀರ್‌ ರಾಡ್ನಿ ಸ್ಟಾರ್ಮರ್‌ ಆಗಿದೆ ಅವರು ಅತ್ಯಂತ ಬಡ ಕುಟುಂಬದವರಾಗಿದ್ದರು. ಪ್ರಾಣಿ ಪ್ರಿಯರಾಗಿದ್ದ ಅವರ ಹೆತ್ತವರು ಕತ್ತೆಗಳನ್ನು ರಕ್ಷಿಸುತ್ತಿದ್ದರು.

ಪ್ರತಿಭಾನ್ವಿತ ಸಂಗೀತ ಕಲಾವಿದರಾಗಿರುವ ಸ್ಟಾರ್ಮರ್‌ ವಾಯಿಲಿನ್‌ ತರಗತಿಗಳಿಗೆ ಹಾಜರಾಗಿದ್ದರು.

ಲೀಡ್ಸ್‌ ಮತ್ತು ಆಕ್ಸ್‌ಫರ್ಡ್‌ ವಿವಿಗಳಲ್ಲಿ ಕಾನೂನು ಶಿಕ್ಷಣದ ನಂತರ ಎಡಪಂಥೀಯ ಉದ್ದೇಶಗಳತ್ತ ಅವರು ಹೆಚ್ಚು ಒಲವು ವ್ಯಕ್ತಪಡಿಸಿ ಕಾರ್ಮಿಕ ಸಂಘಗಳ ಪರ ಕೆಲಸ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News