ಯೆಮನ್: ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 12 ಯೋಧರ ಮೃತ್ಯು

Update: 2024-08-16 14:04 GMT

  ಸಾಂದರ್ಭಿಕ ಚಿತ್ರ

ಸನಾ : ದಕ್ಷಿಣ ಯೆಮನ್ ನ ಅಬ್ಯಾನ್ ನಲ್ಲಿ ಸೇನಾ ನೆಲೆಯ ಮೇಲೆ ಶುಕ್ರವಾರ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 12 ಯೆಮನ್ ಯೋಧರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಮುದಿಯಾಹ್ ಜಿಲ್ಲೆಯಲ್ಲಿ ಆತ್ಮಹತ್ಯಾ ಬಾಂಬರ್ ಬಾಂಬ್ ಇರಿಸಿದ್ದ ಕಾರನ್ನು ಭದ್ರತಾ ಪಡೆಗಳ ಶಿಬಿರದ ಮೇಲೆ ನುಗ್ಗಿಸಿದ್ದಾನೆ. ಬಾಂಬ್ ಸ್ಫೋಟಿಸಿದಾಗ 9 ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದುವರೆಗೆ ಯಾವುದೇ ಗುಂಪು ದಾಳಿಯ ಹೊಣೆ ವಹಿಸಿಲ್ಲ. ಆದರೆ ಅಲ್ಖೈದಾದ ಜತೆ ಸಂಪರ್ಕ ಹೊಂದಿರುವ ಸಶಸ್ತ್ರ ಹೋರಾಟಗಾರರ ಸ್ಥಳೀಯ ಗುಂಪು ದಾಳಿ ನಡೆಸಿರುವ ಸಾಧ್ಯತೆಯಿದೆ ಎಂದು ದಕ್ಷಿಣ ಪರಿವರ್ತನಾ ಮಂಡಳಿಯ ವಕ್ತಾರ ಮುಹಮ್ಮದ್ ಅಲ್-ನಖಿಬ್ ಹೇಳಿದ್ದಾರೆ.

ಯೆಮನ್ ನಲ್ಲಿ ಇರಾನ್ ಬೆಂಬಲಿತ ಹೌದಿಗಳ ಗುಂಪು ಹಾಗೂ ಸೌದಿ ಅರೆಬಿಯಾ ಬೆಂಬಲಿತ ಮೈತ್ರಿದೇಶಗಳ ಪಡೆಯ ನಡುವೆ ನಡೆಯುತ್ತಿರುವ ಸಂಘರ್ಷದ ಲಾಭ ಪಡೆದು ಈ ವಲಯದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಅಲ್ಖೈದಾದ ಸಹಸಂಸ್ಥೆ ಪ್ರಯತ್ನಿಸುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News