ಯತ್ನಾಳ್ ವಿರುದ್ಧ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಕೇಸ್ ಹಾಕುವೆ : ಸಿ.ಎಂ.ಇಬ್ರಾಹಿಂ

Update: 2024-11-08 12:50 GMT

ಸಿ.ಎಂ.ಇಬ್ರಾಹೀಂ

ಕಲಬುರಗಿ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸುತ್ತೇನೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼನಾನು ವಕ್ಫ್ ಆಸ್ತಿ ಕಬಳಿಸಿದ್ದೇನೆ ಎಂದು ಯತ್ನಾಳ್ ಆರೋಪಿಸಿದ್ದಾರೆ, ಅವರು ನನಗೆ ಬೇಷರತ್ತಾಗಿ ಕ್ಷಮೆ ಕೇಳಬೇಕುʼ ಎಂದು ಇಬ್ರಾಹಿಂ ಆಗ್ರಹಿಸಿದ್ದಾರೆ.

"ನಾನು ಎಲ್ಲಿ? ಎಷ್ಟು ? ವಕ್ಫ್ ಬೋರ್ಡ್ ಆಸ್ತಿ ತಗೆದುಕೊಂಡಿದ್ದೇನೆ ಎಂದು ಹೇಳಬೇಕು. ಇಲ್ಲ ಅಂದರೆ ಕೂಡಲೇ ಬೇಷರತ್ತಾಗಿ ನನಗೆ ಕ್ಷಮೆ ಕೇಳಬೇಕು. ನಾನು ಇದುವರೆಗೆ ದಾನ ಕೊಟ್ಟಿದ್ದೇನೆಯೇ ಹೊರತು, ದಾನ ಪಡೆದುಕೊಂಡಿಲ್ಲ. ಒಂದು ವೇಳೆ ಕ್ಷಮೆ ಕೊರದಿದ್ದರೆ ಮಾನನಷ್ಟ ಮೊಕದ್ದಮೆ ಹಾಕುವೆ" ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರಕಾರ ಗೊಂದಲದಲ್ಲಿದೆ :

ʼವಕ್ಫ್ ಬೋರ್ಡ್ ವಿಚಾರದಲ್ಲಿ ಈ ಸರಕಾರ ಬೇಡದೇ ಇರುವ ವಿವಾದ ಮಾಡಿಕೊಂಡಿದೆ. ವಕ್ಫ್ ಬೋರ್ಡ್ ಅದಾಲತ್ ಒಂದು ರೂಟೀನ್ ಪ್ರೊಸೆಸ್. ಆದರೆ ಇದನ್ನು ಈ ಸರಕಾರ ತಿಪ್ಪೆ ಕಸ ಮೈ ಮೇಲೆ ಎಳೆದುಕೊಂಡಂತೆ ಮಾಡಿಕೊಂಡಿದೆ. ಈ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಕಾಲದಲ್ಲೂ 240 ನೋಟಿಸ್ ಜನರಿಗೆ ಕೊಡಲಾಗಿತ್ತು. ಈಗ ಸರಕಾರ ಎಲ್ಲಾ ನೋಟಿಸ್ ರದ್ದು ಮಾಡುವ ಮೂಲಕ ಸ್ವತಃ ಗೊಂದಲದಲ್ಲಿದೆʼ ಎಂದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News