ಪ್ರಿಯಾಂಕ್ ಖರ್ಗೆ ವಿರುದ್ಧ ಮಾಡುತ್ತಿರುವ ಆರೋಪ ರಾಜಕೀಯ ಷಡ್ಯಂತ್ರ : ಕಾಂಗ್ರೆಸ್

Update: 2025-01-04 13:34 GMT

ಕಲಬುರಗಿ : ಪ್ರಿಯಾಂಕ್ ಖರ್ಗೆ ಅವರ ಏಳಿಗೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಸಹಿಸದ ಬಿಜೆಪಿಯವರು ಮತ್ತು ಕಲಬುರಗಿಯ ಕೆಲ ರಾಜಕೀಯ ಮುಖಂಡರು ಆಧಾರವಿಲ್ಲದೆ ಅವರ ಮೇಲೆ ಗಂಭೀರ ಆರೋಪ ಮಾಡುತ್ತಿದ್ದಾರೆ ಎಂದು ಕೆ.ಪಿ.ಸಿ.ಸಿ. ಸದಸ್ಯ ಶ್ರೀನಿವಾಸ ಸಗರ್ ರಾವೂರ್ ಹಾಗೂ ಮಾಜಿ ಜಿ.ಪಂ.ಸದಸ್ಯ ಅಬ್ದುಲ್ ಅಜೀಜ್ ಶೇಠ್ ಜಂಟಿಯಾಗಿ ಹೇಳಿದರು.

ಸಚಿನ್ ಪಾಂಚಾಳ ಸಾವಿಗೆ ಸಚಿವರನ್ನು ಕಾರಣರಾಗಿಸುತ್ತಿರುವುದು ಇದು ರಾಜಕೀಯ ಷಡ್ಯಂತ್ರವಾಗಿದೆ. ಯುವಕನ ಸಾವಿಗೂ ಮತ್ತು ಪ್ರಿಯಾಂಕ್ ಖರ್ಗೆಯವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದ್ದರೂ ಸಹಿತ ಅವರ ರಾಜೀನಾಮೆಯನ್ನು ಕೇಳುತ್ತಿರುವುದು ಅಸಂವಿಧಾನಿಕವಾಗಿದೆ. ದಶಕಗಳಿಂದ ಕಲಬುರಗಿಯಲ್ಲಿ ಖರ್ಗೆ ಕುಟುಂಬ ಆಸ್ಪತ್ರೆ, ರಸ್ತೆ, ಶೈಕ್ಷಣಿಕ ಸಂಸ್ಥೆ ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತ ಜನಪರ ಯೋಜನೆಗಳು, ಅಭಿವೃದ್ಧಿ ಕೆಲಸಗಳು ಮಾಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.

ಸಿಐಡಿ ತನಿಖೆಗೆ ನೀಡಲಾಗಿದ್ದರೂ ಸಹಿತ ಕೆಲವರು ಮಾತ್ರ ಈ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ಸಚಿವರ ರಾಜಿನಾಮೆ ಕೇಳುತ್ತಿರುವುದು, ಧರಣಿ ಮಾಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹೈ.ಕ.ಪಟೇಲ್ ಮಂಚ ಅಧ್ಯಕ್ಷ ಯೂಸುಪ್ ಪಟೇಲ್, ತಂ.ಜಾಥರ ಪಟೇಲ ಕುಂದನೂರ, ಕಾಂಗ್ರೇಸ್ ಮುಖಂಡರಾದ ಮೆಹರಾಜ್ ಪಟೇಲ್, ಮಶಾಕ ಶೇಠ್ ರಾವೂರ, ಸತೀಶ ಶ್ರೀನಿವಾಸ ಸಗರ ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News