ಕಲಬುರಗಿ | ಕಸಾಪದಿಂದ ಸಾಹಿತಿ ಡಾ.ನಾ ಡಿಸೋಜಾ ಅವರಿಗೆ ಶ್ರದ್ಧಾಂಜಲಿ
ಕಲಬುರಗಿ : ನಾಡಿನ ಖ್ಯಾತ ಬರಹಗಾರ ಡಾ.ನಾ ಡಿಸೋಜಾ ಅವರ ನಿಧನದ ಹಿನ್ನೆಲೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ಸೋಮವಾರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಸರ್ವಧರ್ಮದ ಪ್ರತಿಪಾದಕರಾಗಿ, ಬಸವಾದಿ ಶರಣರ ವೈಚಾರಿಕ ಪ್ರಜ್ಞೆಯ ಚಿಂತಕರಾದ ಹಿರಿಯ ಸಾಹಿತಿ ಡಾ.ನಾ ಡಿಸೋಜಾ ಅವರು ಪ್ರಕೃತಿಯ ಕಾಳಜಿವುಳ್ಳ ಲೇಖಕರಾಗಿದ್ದರು. ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕಸಾಪದ ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಗಣೇಶ ಚಿನ್ನಾಕಾರ, ಧರ್ಮರಾಜ ಜವಳಿ, ಪ್ರಭುಲಿಂಗ ಮೂಲಗೆ, ಸಂಧ್ಯಾರಾಜ್, ಸುಮಂತ್ ಸರಡಗಿ, ಜಯಪ್ರಭು, ಶಿರೋಮಣಿ, ಪರಶುರಾಮ್, ಸುನೀಲ್ ಇಟಗಿ, ಸುಧೀಂದ್ರ ದಾಸ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.